ನಿನ್ನಲ್ಲೊಂದು ಅರಿಕೆಯು ನನ್ನದು ಗುರುನಾಥನೇ ಕೇಳುವೆಯಾ
ಮಹಾಮಾರಿಯೊಂದು ಅವರಿಸಿಹುದು ನಿನ್ನ ಬಕುತರಿರುವ ಜಗದಲಿಂದು|
ಎಲ್ಲಾ ನಾನೆಂಬ ಬಾವದೊಳು ಬದುಕು ನಡೆಸುವ ಮನುಜಗೆ ಪಾಠವೇ ಇದು
ಇನ್ನೂ ಬೇಕೆಂಬ ದುರಾಸೆಯು ಕರ್ಮ ಕೂಪಕೆ ದಾರಿ ತೋರಿಹಿದೋ|
ಗುರುಹಿರಿಯರ ಸಾದುಸಂತರ ಸೇವೆ ಸಲ್ಲಿಸದ ಮೋಜು ಮಸ್ತಿಗೆ ಇದು ಉತ್ತರವೇ
ಎಲ್ಲಾ ಪಡೆವೆನೆಂಬ ಧಾವಂತದ ಓಟಕೆ ನಿನ್ನ ಮೌನದ ಕಡಿವಾಣವೇ|
ಮಲಿನ ಮನದ ದುರಂಹಕಾರದ ನಡೆ ನುಡಿಗೆ ಮನುಜ ತೆರುತಿರುವ ದಂಡವೇ
ಮಾತೆ ಭಗಿನಿಯರ ನೋವು ನಿಟ್ಟಿಸುರಿಗೆ ಲೋಕ ಕೊಡುತಿಹ ತೆರಿಗೆಯೇ|
ಗುರುವೇ ನಿನ್ನಲೊಂದು ಮನವಿಯು ಎಲ್ಲರನು ಮನ್ನಿಸಿ ಪೊರೆಯೋ ದೊರೆಯೇ
ನಿನ್ನ ಮಕ್ಕಳ ತಪ್ಪು ಒಪ್ಪುಗಳ ಗಣನೆ ಮಾಡದೆ ಎಚ್ಚರಿಕೆ ನೀಡಿ ಸಲಹೋ ಪ್ರಭುವೇ|