ಗುರುವೆಂದು ನುಡಿಯುತ ಎಲ್ಲಾ ನೀನೆಂದು ಹೇಳುತ ಬರೀ ನಟಿಸಿ ಬದುಕಿದೆನು
ನಿನ್ನ ನುಡಿಯ ಆಲಿಸದೆ ನಿನ್ನ ತತ್ವ ಅರಿಯದೆ ಬರೀ ವೇಷ ದರಿಸಿ ಬಾಳಿದೆನೋ.
ಕೊಡು ಕೊಡೆಂದು ಸದಾ ಬೇಡುತ ಬೆಂಬಿಡದೆ ನಿನ್ನ ಕಾಡಿದೆನೋ
ನಂಬಿದಂತೆ ನಟಿಸಿ ಬೇಡುವವನಂತೆ ತೋರಿಸಿ ಭಕುತಿಗೆ ವಂಚಿಸಿದೆನೋ.
ಗುಂಪಿನಲಿ ನಿಂತು ತೋರಿಕೆಯ ಭಕುತಿ ಬೀರಿ ನನಗೆ ನಾ ವಂಚಿಸಿ ಕೊಂಡೆನೋ
ಅನ್ಯರ ಬಕುತಿಯ ಅರಿಯದೆ ತೋರಿಕೆಯ ಭಾವ ತೋರಿ ಸೋತೆನೋ.
ಸ್ವಾರ್ಥದ ಭಕುತಿ ತೋರಿ ಆಸೆಗಳ ಹೊರೆ ಹೊತ್ತು ನಿನ್ನ ಬೇಡಿದೆನೋ
ಮಾಡುವ ಕುಕರ್ಮಕೆ ನಿನ್ನ ಬೆಂಬಲ ಬೇಡಿ ಬಂಡ ಬದುಕ ಬಾಳಿದೆನೋ.
ತಂದೆ ತಾಯಿಯರ ಸಲಹದೆ ಬೂಟಾಟಿಕೆಯ ಬದುಕು ನಡೆಸಿ ಕೊರಗಿದೆನೋ
ಓ ಸಖರಾಯಾಧೀಶ ಎನ್ನ ಸಲಹೆನ್ನಲು ಕನಿಕರದಿ ಬರುವೆಯಾ ನೀನು.