ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ
ಅಂತೆ ಕಂತೆಗಳ ಸಂತೆಯೊಳು ಬದುಕ ನಡೆಸಿ ನಿನ್ನ ಮರೆತ ದಿನವೆಷ್ಟೋ.
ಏನಿದು ಗುರುದೇವ ಏನಿದು ನಿನ್ನ ಲೀಲಾ ಪರಿಯ ನಾ ತಿಳಿಯೆ
ನಾ ನಿನ್ನವನಲ್ಲದೇ ಹೋದರೆ ನೀ ಎನ್ನ ಮನದೊಳು ಯಾಕೆ ನಿಂತಿರುವೆ.
ಭವರೋಗ ವೈದ್ಯನು ನೀನು ಭವ ಭಂದನ ಬಿಡಿಸುವವ ನೀನು
ಎಲ್ಲಾ ಕರ್ಮ ಮಾಡಿ ಕುಕರ್ಮಿಯಾದ ನಾನು ನಿನ್ನ ಬೇಡುವ ಅರ್ಹತೆ ನನಗೇನು.
ನಾ ಅರಿತು ಮಾಡುವ ಕರ್ಮಕೆ ಹೊಣೆಯಾರು ತಿಳಿಸು ಗುರುವೇ
ಲೌಕಿಕದ ಬಣ್ಣಗಳ ವಿವಿಧ ವಾಸನೆಗಳ ಸುಳಿಯಿಂದ ದೂರಿಡೋ ಪ್ರಭುವೇ.
ನಾನು ನಾನಲ್ಲ ಯಾವುದೂ ನನದಲ್ಲ ಆದರೂ ಒಪ್ಪುವ ಮನವಲ್ಲ
ನೀನೇ ಎಲ್ಲಾ ನಿನ್ನ ಲೀಲೆಗೆ ಕೊನೆಯಿಲ್ಲ ನಾ ಅರಿಯದೆ ಹೋದೆ ಸಖರಾಯಪ್ರಭುವೇ.