ಜೊತೆ ಇರಲು ನೀನು ಭಯ ಪಡೆನು ನಾನು ಇನ್ನೆಂದೂ ಗುರುನಾಥ
ಅಭಯ ನೀಡಲು ನೀನು ಇನ್ನೇಕೆ ಮರುಗುವೆನು ನಾನು ಹೇಳೋ ಗುರುನಾಥ.
ದೂರ ಮಾಡಿದೆ ನೀನೆಂದು ಕೊರಗುತಲಿ ಕಾಲ ಕಳೆದೆನು ಗುರುದೇವ
ನೀ ಜೊತೆಗಿರಲು ಬದುಕು ನಡೆವುದ ಅರಿಯದೇ ಮೂಡನಾದೆ ಗುರುದೇವ.
ಕರ್ಮದ ಫಲವು ಕಾಡುವುದೆಂದು ನೀ ಹೇಳಿದರೂ ಸುಮ್ಮನೆ ಕೊರಗಿದೆ ನಾನು
ನಿನ್ನ ಚರಣದಲಿ ಶಿರವಿರಿಸಿ ಎಲ್ಲವೂ ನಿನ್ನದೆನುವುದ ಮರೆತು ಹಲುಬಿದೆ ನಾನು.
ಕಾಯುವುದ ಕಲಿಯಲಿಲ್ಲ ಬರೀ ಅವಸರದಲಿ ಬೇಡುವುದೊಂದೇ ಬದುಕಾಯಿತು
ಬೇಕು ಬೇಡಗಳ ಸುಳಿಯೊಳು ಬದುಕಿನರ್ಥ ಅರಿಯದೆ ಸಮಯ ವ್ಯರ್ಥವಾಯಿತು.
ನೀ ಹರಸ ಬೇಕೆಂಬುದು ನನ್ನ ಬಯಕೆ ಆಗದಿರಲಿ ಅದು ಬರೀ ಮರೀಚಿಕೆ
ಸಕಲವನು ಅರಿತಿಹ ನಿನ್ನ ಬೇಡುವುದು ಕಾಡುವುದು ಸರಿಯೇನು ಸಖರಾಯಾಧೀಶ.
No comments:
Post a Comment