ಕರ್ನಾಟಕದ ಸುಪ್ರಸಿದ್ಧ ಅವಧೂತರಾದ ಸಖರಾಯಪಟ್ಟಣದ ಶ್ರೀ.ವೆಂಕಟಾಚಲ ಅವಧೂತರ ಜೀವನ, ಅವರು ನಡೆಸಿದ ಲೀಲೆಗಳು ಮತ್ತು ಅವರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರಪ್ರಥಮ ಬ್ಲಾಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬ್ಲಾಗ್ ನಲ್ಲಿ ನೀಡಿರುವ ಮಾಹಿತಿಗಳನ್ನು ಸಂಗ್ರಹಿಸಲು ನನಗೆ ಹಲವಾರು ಗುರು ಬಂಧುಗಳು ಸಹಾಯ ಮಾಡಿರುತ್ತಾರೆ. ಈ ಬ್ಲಾಗ್ ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಿಲ್ಲ. ಆದ ಕಾರಣ, ಯಾರಾದರೂ ಬ್ಲಾಗ್ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲು ಗುರುಬಂಧುಗಳನ್ನು ಸಂಪರ್ಕಿಸಿದಲ್ಲಿ ದಯಮಾಡಿ ನೀಡಬಾರದಾಗಿ ವಿನಂತಿ.
Thursday, September 14, 2017
ಗುರುನಾಥ ಸ್ತೋತ್ರ ಕುಸುಮಾಂಜಲಿ
ಜಲೇ ಕ್ಷಾರೋ ಯಥಾ ಪೂರ್ಣಂ
ಗಲತ್ಯಭೇಧ ದೃಶ್ಯತೇ |
ಆತ್ಮಾನುಸಂಧಾನಮಾನವೇ
ಶಿವೋಹಮಿತಿ ಅದ್ವೈತಃ ||
ಕರಗಿದರೆ ಉಪ್ಪು ನೀರಿನಲ್ಲಿ ಕಾಣದು ಸ್ವಲ್ಪವೂ ಅದರಲ್ಲಿ ಪರಬ್ರಹ್ಮಾನುಸಂಧಾನದಿ ಮುಳುಗಿದಂದು ಭೇದವು ತೋರದು ನಾನು ನೀನೆಂದು.
No comments:
Post a Comment