ಗುರುನಾಥ ಗಾನಾಮೃತ
ಮೌನದಲಿ ಬೇಡುವೆ ನನ್ನ ಗುರುವೇ ಎನ್ನ ಮೊರೆಯ ಆಲಿಸೋ ದೊರೆಯೇ
ರಚನೆ: ಆನಂದರಾಮ್, ಶೃಂಗೇರಿ
ಮೌನದಲಿ ಬೇಡುವೆ ನನ್ನ ಗುರುವೇ ಎನ್ನ ಮೊರೆಯ ಆಲಿಸೋ ದೊರೆಯೇ
ಎಷ್ಟು ಬೇಡಿದರೂ ಸಾಲದು ಕೊನೆ ಇಲ್ಲದ ಇಷ್ಟಗಳು ನೆರವೇರಲು|
ಮನವ ತಹಬಂದಿಗೆ ತರಲಾರೆನೋ ಎನ್ನ ಮನ್ನಿಸೋ ನನ್ನ ಒಡೆಯ
ಧೂರ್ತ ಯೋಚನೆಯ ಸುಳಿಯ ಮಧ್ಯೆ ಸಿಲುಕಿ ಮನ ನರಳುತಿದೆ ನೀ ನೋಡೆಯಾ|
ಕರುಬು ತನದ ಬಾದೆಯದು ಉದರ ಶೂಲೆಯ ತಂದಿಹುದಯ್ಯ
ಕನಿಕರಿಸಿ ಮಲಿನ ಮನವ ಶುದ್ದಗೊಳಿಸಿ ಮನ ನಿನ್ನಲಿ ನಿಲ್ಲಿಸಯ್ಯ|
ಆವರಿಸಿಕೊಂಡಿರುವ ಭ್ರಮೆಯ ಅಳಿಸೋ ಎನ್ನ ಉದ್ದರಿಸೋ
ನಿಜವ ಅರಿಯಲು ಮನಸ ಹದಮಾಡಿ ಸರಿ ದಾರಿಯಾ ತೋರಿಸೋ|
ಬಯಸುವುದೆಲ್ಲಾ ನಿಜವಲ್ಲ ಎಂಬುದ ತಿಳಿಯುವ ಮನ ಕೊಡೋ ಗುರುವೇ
ನೀನಿದ್ದ ಮೇಲೆ ನಿನ್ನದೆಂದು ಅರಿತು ಬಾಳುವ ಅರಿವು ಮೂಡಿಸಯ್ಯಾ ದೊರೆಯೇ|
Hello sir,
ReplyDeleteI need a information regarding Avadhootara Charitra book.
Please provide me with any information you have on this topic. I am particularly looking for a online solution to book the chaitra book. Otherwise a softcopy is also a suitable solution. This a birthday gift for my mother so please let me know.
Regards
Swathi