ಗುರುನಾಥ ಗಾನಾಮೃತ
ಕುಳಿತಿಹರು ಗುರುವರರು ಮರದ ನೆರಳಲಿ ಮಂದ ಹಾಸ ಬೀರುತ ಹರಸುತ
ರಚನೆ: ಆನಂದರಾಮ್, ಶೃಂಗೇರಿ
ಕುಳಿತಿಹರು ಗುರುವರರು ಮರದ ನೆರಳಲಿ ಮಂದ ಹಾಸ ಬೀರುತ ಹರಸುತ
ಬಂದ ಬಕುತರ ಬವಣೆ ತೀರಿಸುತ ಮಹಾದೇವನೇ ತಾನಾಗಿ ತೋರುತ|
ನೀಡುವ ಅಭಯದೊಳು ಪ್ರೀತಿ ತುಂಬಿ ಮನವ ತುಂಬುವರು
ಜೊತೆ ನಾನಿರುವೆ ಸತ್ಯದ ಹಾದಿಯಲಿ ನಡೆದು ಬದುಕೆನ್ನುವರು|
ಬಕುತಿಯಲಿ ಆಡಂಬರ ಮಾಡದೆ ನಡೆದರೆ ನಿನ್ನ ಒಪ್ಪುವರು
ನಾನು ಎಂಬುದ ಮರೆತು ಬಜಿಸುತಿರೆ ನಿನ್ನ ಸಂಗಡ ಗುರು ಇರುವರು|
ನಿನ್ನ ಬಕುತಿಯ ರೀತಿ ತಿಳಿಯಲು ನಿನ್ನ ಮನ ಹೊಕ್ಕು ನೋಡುವರು
ಕಂಡೂ ಕಾಣದಂತಿದ್ದು ನೀ ಎಡವದಂತೆ ಜೊತೆ ಇದ್ದು ಕಾಯುವರು|
ಎಲ್ಲರಲೂ ನೀ ಗುರು ಕಂಡಾಗ ನಿನ್ನ0ತರಂಗದ ಕದವ ತೆರೆವರು
ನಿನ್ನೆಲ್ಲಾ ಸಾಧನೆ ಅವನದು ಎಂದು ಅರ್ಪಿಸಲು ನಿನ್ನ ಉದ್ದರಿಸುವರು|
No comments:
Post a Comment