ಬಂಧಮುಕ್ತ ಮಾಡೋ ಎನ್ನನು ಮನದ ಮಲಿನ ಭಾವಗಳಿಂದ
ಪರಿಶುದ್ಧ ಮಾಡೋ ಎನ್ನ ಹೃದಯವ ಸದಾ ನಿನ್ನ ಸ್ಮರಣೆಯಿಂದ|
ಬೇಡಲೂ ಭಯವಾಗುತಿದೆ ಗುರುವೇ ಕಪಟ ತುಂಬಿದ ಮಾತಿನಿಂದ
ವಿಧ ವಿಧ ವೇಷ ಧರಿಸೆ ಭಕುತಿ ಇಲ್ಲದ ಭಾವಾವೇಷದಿಂದ |
ಪರಿ ಪರಿಯ ಬೇಡಿಕೆಯ ಮುಂದಿಡಲಾರೆ ಮುಕ್ತಗೊಳಿಸೆನ್ನ ಕರ್ಮದಿಂದ
ಬಿಡುಗಡೆಗೊಳಿಸೆನ್ನ ಮನವ ಗುರುವೇ ಅನ್ಯರಾ ವಿಷಯದ ಆಸೆಯಿಂದ|
ಮಂತ್ರ ತಂತ್ರದ ಅರಿವಿಲ್ಲ ಎನಗೆ ದೂರ ಮಾಡು ಎನ್ನ ಮನವ ಶಂಕೆಯಿಂದ
ಕಟ್ಟು ಪಾಡುಗಳು ಬೇಡವೆನಗೆ ನೀಡೋ ಮನಕೆ ಶಾಂತಿಯ ನಿನ್ನ ಸೇವೆಯಿಂದ|
ನಿನ್ನ ಪಾದಕಮಲದಡಿ ಎನ್ನ ಶಿರವಿಟ್ಟು ಬೇಡುವೆನು ಕುರುಡು ಬಕುತಿಯಿಂದ
ದೂರ ಮಾಡಬೇಡ ಎನ್ನನು ಗುರುವೇ ನಿನ್ನ ನಿಜ ಬಕುತರ ಸಂಗದಿಂದ|
Om namo venkatachala guruven namaha
ReplyDeletePoojya venkatachala avadootarige nanna saashtaanga pranaamagalu. Yellaranu ee kantaka dinda mukthi kodi haagu rakshe sadaa yellara mele erali. Hari om tatsat.
ReplyDelete