ನಿನ್ನ ದಿವ್ಯ ಚರಣ ಕಂಡ ಮನವು ಬಲು ಮುದದಿ ಕುಣಿದಾಡಿತೋ
ಹೃದಯ ಕಮಲದಿ ನಿನ್ನ ಸ್ಮರಣೆ ನೆಲೆ ನಿಂತು ಧನ್ಯವಾಯಿತೋ ಗುರುವೇ|
ಬುದ್ದಿ ಇಲ್ಲದಾ ಜೀವವಿದು ನಿನ್ನ ನೆನೆವ ಅರಿವು ಪಡೆಯಿತೋ
ಕರ್ಮ ಫಲದ ಅರಿವಿಲ್ಲದೇ ಬದುಕು ನಡೆಸಿ ಮೂಡನಾಯಿತೋ|
ಅಂತರಂಗದಿ ಭಾವ ಶುದ್ದಿ ಇಲ್ಲದೇ ವೇಷ ಧರಿಸಿ ದಿನವ ಕಳೆಯಿತೋ
ಅರಿವಿದ್ದರೂ ಬಾಳು ನಡೆಸಿ ಕಪಟನಾಗಿ ಪಾಪಿಯಾಯಿತೋ|
ತೋರಿಕೆಯ ಭಕುತಿ ಮಾಡಿ ಮಲಿನ ಮನವ ಸಂಗ ಪಡೆಯಿತೋ
ಮೂರು ದಿನದ ಬದುಕಿಗಾಗಿ ಬಣ್ಣ ಬಣ್ಣದ ವೇಷವ ದರಿಸಿತೋ|
ನಿನ್ನ ನಾಮವೊಂದೇ ಸಕಾಯ್ತು ಎನ್ನ ಮನಕೆ ಬದುಕ ಕಲಿಸಿತೋ
ಸದಾ ನಿನ್ನ ಒಲುಮೆಗಾಗಿ ಮನವು ಮಿಡಿದು ನಿನ್ನ ಪಾದ ಪಿಡಿಯಿತೋ|
Poojya Gurugalaada venkatachalarige nanna bhakti poorvaka namanagalu.
ReplyDelete