ಹರಣವಾಗಲಿ ಎನ್ನ ಗರ್ವವು ನಿನ್ನ ಮರೆತು ಮೆರೆಯುತಿಹೆ ನಾನಿಲ್ಲಿ
ಬರಲಿ ಎನ್ನ ಮನಕೆ ನಿನ್ನ ಸ್ಮರಣೆಯು ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಯಲಿ|
ಯಾರಗೊಡವೆ ಎನಗೆ ಬೇಡ ನೀಡೆನಗೆ ಮನದ ಶಾಂತಿ ನಿನ್ನ ಬಜಿಪ ಕಾಯಕದಲಿ
ನಿತ್ಯ ಎನ್ನ ಬದುಕಲಿ ನಿನ್ನ ಕರುಣೆಯ ಫಲವಾಗಿ ಭಕುತಿ ತುಂಬಿ ಹರಿಯಲಿ|
ಮನವ ಮರ್ಧಿಸಿ ನಾನೆಂಬ ಭಾವವ ಅಳಿಸಿ ಅಲ್ಪ ನಾನೆಂಬುದ ತಿಳಿಸಿ ಹೇಳಲಿ
ನಿನ್ನ ದರುಶನ ದೊರೆಯಲಿಲ್ಲ ಅಂದು ಮಾಡಿದ ಕುಕರ್ಮ ಕಾಡಿತೆನ್ನ ನಾನೇನು ಮಾಡಲಿ|
ಏನು ಅರ್ಪಿಸಿ ನಿನ್ನ ಬೇಡಲಿ ಶುದ್ಧ ಭಾವದ ಕೊರತೆ ನೀಗಿ ನನ್ನ ಬಾಳ ಹರಸಲಿ
ಬೇಡಿತೆನ್ನ ಮನವು ಇಂದು ಒಂದು ನೋಟ ಮನದ ಬ್ರಾಂತಿ ದೂರ ಮಾಡಲಿ|
ಆರು ಅರಿಗಳ ಸಂಗ ಮಾಡಿ ಪ್ರತೀ ಗಳಿಗೆ ವ್ಯರ್ಥವಾಯ್ತು ಯಾರ ಬಳಿ ಹೇಳಲಿ
ಅಲ್ಪ ಸುಖದ ಬೆನ್ನ ಏರಿ ಎಲ್ಲಾ ಪಡೆದೆನೆಂಬ ಹುಂಬತನದಿ ಸೋತು ಬಂದಿಹೆನಿಲ್ಲಿ|
ಎಲ್ಲಾ ಅರಿತಿಹ ಮಹದೇವ ನೀನು ನನ್ನ ಬಾಳ ದಾರಿದೀಪವಾಗಿ ಬೆಳಗಲಿ
ಸಖರಾಯಧೀಶ ಪ್ರಭುವೇ ಮೊರೆಯ ಕೇಳೋ ಉಳಿದ ಬಾಳು ನಿನಗೆ ಮೀಸಲಾಗಲಿ|
Gurudeva venkatachala, yellarigu nimma aashirvaada haagu rakshe doreyali. Hari om tatsat.
ReplyDelete