ಕರ್ನಾಟಕದ ಸುಪ್ರಸಿದ್ಧ ಅವಧೂತರಾದ ಸಖರಾಯಪಟ್ಟಣದ ಶ್ರೀ.ವೆಂಕಟಾಚಲ ಅವಧೂತರ ಜೀವನ, ಅವರು ನಡೆಸಿದ ಲೀಲೆಗಳು ಮತ್ತು ಅವರ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಲುವಾಗಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರಪ್ರಥಮ ಬ್ಲಾಗ್ ಅನ್ನು ಪ್ರಾರಂಭಿಸಲಾಗಿದೆ. ಈ ಬ್ಲಾಗ್ ನಲ್ಲಿ ನೀಡಿರುವ ಮಾಹಿತಿಗಳನ್ನು ಸಂಗ್ರಹಿಸಲು ನನಗೆ ಹಲವಾರು ಗುರು ಬಂಧುಗಳು ಸಹಾಯ ಮಾಡಿರುತ್ತಾರೆ. ಈ ಬ್ಲಾಗ್ ಯಾವುದೇ ಬ್ಯಾಂಕ್ ಖಾತೆಯನ್ನು ಹೊಂದಿರುವುದಿಲ್ಲ. ಆದ ಕಾರಣ, ಯಾರಾದರೂ ಬ್ಲಾಗ್ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲು ಗುರುಬಂಧುಗಳನ್ನು ಸಂಪರ್ಕಿಸಿದಲ್ಲಿ ದಯಮಾಡಿ ನೀಡಬಾರದಾಗಿ ವಿನಂತಿ.
Wednesday, November 18, 2020
ಶ್ರೀ ಸದ್ಗುರು ಮಹಿಮೆ ಗ್ರಂಥ ದೊರೆಯುವ ಸ್ಥಳ
ಆತ್ಮೀಯ ಗುರು ಬಂಧುಗಳೆ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಸುಪ್ರಸಿದ್ಧ ಅವಧೂತರಾದ ಶ್ರೀ. ವೆಂಕಟಾಚಲ ಅವಧೂತರ ದಿವ್ಯ ಮಹಿಮೆಗಳನ್ನು ಒಳಗೊಂಡ "ಸದ್ಗುರು ಮಹಿಮೆ" ಉದ್ಗ್ರಂಥವು ಈಗ ಬೆಂಗಳೂರಿನ ಚಾಮರಾಜಪೇಟೆಯ ವೇದಾಂತ ಬುಕ್ ಹೌಸ್ ನಲ್ಲಿ ಲಭ್ಯವಿದೆ. ಪುಸ್ತಕದ ಬೆಲೆಯನ್ನು 300 ರೂಪಾಯಿ ಎಂದು ನಿಗದಿ ಮಾಡಲಾಗಿದೆ. ಆಸಕ್ತ ಗುರು ಬಂಧುಗಳು ಗ್ರಂಥವನ್ನು ವೇದಾಂತ ಬುಕ್ ಹೌಸ್ ನಿಂದ ಖರೀದಿಸಬಹುದು.
Guru Venkatachala Avara paadagalige nanna bhakti poorvaka namanagalu. Hari om tatsat.
ReplyDelete