ಸಾಧನೆಯ ಹಾದಿಯೊಳು ಭಾದಕಗಳ ಕಾಟವ ದೂರ ಮಾಡೋ ನನ್ನ ದೊರೆಯೇ
ಮೂಡುವ ಭಾವನೆಯ ಅಲೆಗಳ ಶಾಂತಗೊಳಿಸಿ ಸ್ಥಿರ ಮನ ನೀಡೋ ನನ್ನ ಗುರುವೇ|
ಆಸೆಗಳ ಅಲೆಗಳ ಮೇಲೆ ತೇಲುತ ನಿನ್ನ ನೆನೆವುದೇ ಮರೆತನಯ್ಯ ಗುರುವೇ
ಗೊಂದಲದ ಗೂಡಾಗಿರುವ ಮನಕೆ ಸತ್ಯದ ಅರಿವು ನೀಡಿ ಹರಸೋ ಪ್ರಭುವೇ|
ಎಲ್ಲರಂತಲ್ಲ ಎನ್ನ ಮನವು ಮರ್ಕಟದ ಮತಿಯಂತೆ ಕುಣಿವುದು ನೋಡೋ ಪ್ರಭುವೇ
ಚಂಚಲತೆಯ ಹೊಡೆತಕೆ ತತ್ತರಿಸಿ ಮನವು ಬರಿದಾಗಿ ಬೆದರಿತೋ ಗುರುವೇ|
ಕಾಮದಾ ಕಾಟಕೆ ಮನವು ಸೋತು ಸುಣ್ಣವಾಗಿ ಮರುಗಿ ಮುದುಡಿತೋ ಮನವೇ
ನಾನೆಂಬ ಭಾವವು ಮನವ ಆವರಿಸಿ ದಾರಿ ತಪ್ಪಿಸಿ ಪಾಪದ ಹಾದಿ ತುಳಿಯಿತೋ ಗುರುವೇ|
ಪರರ ಸೊತ್ತು ಅನ್ಯರಾ ವಿಷಯಗಳಿಗೆ ಮನವು ಹಂಬಲಿಸಿ ಬದುಕು ಬರಡಾಯಿತೋ
ಉಳಿದ ದಿನಗಳಾ ಬದುಕು ವ್ಯರ್ಥಮಾಡದೆ ನಿನ್ನ ಸೇವಿಸುವ ಮನ ನೀಡೋ ಪ್ರಭುವೇ|
ಎಲ್ಲರೊಳು ಎನ್ನ ಸೇರಿಸಿ ನಿನ್ನವನೆಂದು ಪರಿಗಣಿಸಿ ಎನ್ನ ಕರುಣಿಸೋ ಗುರುವೇ
ನೀ ಎನ್ನ ಹರಸಲು ಇನ್ನೆಲ್ಲಿಯಾ ಭಯ ಎನಗೆ ಕರುನಾಳು ಎನ್ನ ಸಖರಾಯ ಪ್ರಭುವೇ|