ನನ್ನದೆನ್ನಲು ಏನುಂಟೋ ಎಲ್ಲಾ ನೀಡುವವ ಗುರುವೇ ನೀನೇ ಭಗವಂತನಂತೋ
ನಿನ್ನ ಮರೆತರೆ ನಾನೆಂತೋ ಬದುಕು ನಡೆಸುವ ಮಾತು ಇನ್ನೆಂತೋ|
ನಾನ್ಯಾರೋ ಗುರುವೇ ಸರಿ ತಪ್ಪು ಎನಲು ಎನ್ನ ದಾರಿಯೇ ಸರಿಯಿಲ್ಲವಂತೋ
ನಾನಾಡಿದ ಮಾತದು ಅಲಿಪರ ಮನಕೆ ನೋವು ನೀಡಿರೆ ನಿನ್ನ ಮುಂದೆ ಸಲ್ಲುವುದೆಂತೋ|
ಮೆಲು ದನಿಯಲಿ ಪರರ ಜರಿದು ಮಡಿಯುಟ್ಟು ನಿನ್ನ ಭಜಿಸೆ ಫಲವೇನುಂಟೋ
ಮನದೊಳು ಮಲಿನ ತುಂಬಿ ತುಟಿಯೊಳು ನಾಮಜಪಿಸಿರೆ ಸುಖವೇನುಂಟೋ|
ಅನ್ಯರ ಬದುಕ ಹಸನಾಗಿಸದೆ ದುರುಳ ಮಾತೊಳು ಹಂಗಿಸೆ ಏನು ಸುಖವುಂಟೋ
ನಾ ಮಾಡಿದೆನೆಂಬ ಬಕುತಿಯೊಳು ನಿನ್ನನೇ ಮರೆತಿರಲು ನಿನ್ನ ಪಡೆಯುವುದೆಂತೋ|
ಸಾಕು ಮಾಡೆನ್ನ ಬಕುತಿಯ ನಾಟಕವ ನೀ ಒಲಿಯದೆ ಬೇರೆ ದಾರಿ ಎಲ್ಲುಂಟೋ
ಸಖರಾಯಪುರವಾಸಿ ಎಲ್ಲರ ಮಹಾದೇವ ನೀ ಹರಸದೇ ಬಾಳು ಬೆಳಗುವುದೆಂತೋ|
Venkatachala avadootarige nanna bhakti poorvaka namanagalu. Ellaranu
ReplyDeleteHarasi asheervadisi. Hari om tatsat..