ಅವಧೂತನೆಂದರೆ ಅವ ಪರಮಾತ್ಮನು ಸಖರಾಯಧೀಶನು ಭಕ್ತ ಜನ ಪೋಷಿತನು
ನಿತ್ಯ ನಿರಂತರ ಭಜಿಪರ ಕಾಯ್ವನು ಕರುಣಾಪೂರಿತ ನಮ್ಮ ಗುರುನಾಥನು|
ತೋರುವನು ಜಗದಾಟವ ಮೈ ಮರೆಸಿ ಚಿತ್ತವ ಬ್ರಮೆಯೊಳಿರಿಸಿ
ಮನವ ಕುಣಿಸಿ ಬಣ್ಣದ ಬದುಕ ನಿಜವೆನಿಸಿ ಜೀವವ ಭಾವದೊಳಿರಿಸಿ|
ಕಾಯೋ ಎಂದೆನೆಲು ಕರುಣೆಯ ತೋರುತ ಮನದ ಸೋಲನು ಎತ್ತಿ ತೋರುತ
ಮುನ್ನೆಡೆವ ಹಾದಿಯೊಳು ಆಸೆ ಆಮಿಷ ತಂದಿರಿಸಿ ಗಟ್ಟಿ ಮನವ ಬಯಸುತ|
ಮನದೊಳು ಜ್ಯೋತಿ ಬೆಳಗಿಸೆ ನಿತ್ಯ ಬದುಕಿನ ಕತ್ತಲ ಕಳೆವನು ಅವಧೂತ
ಸತ್ಯವಾಗಿಹ ಜೀವಕೆ ಜೊತೆಯಿರೆ ಮುಕ್ತಿಪಥದ ಸಾರಥಿಯಾದನೋ ಭಗವಂತ I
ತನ್ನೊಳಗಿಹ ಆರು ಅರಿಗಳ ಭಯದಿಂದ ದೂರವಿರಿಸೆಂದು ಕೂಗಿ ಬೇಡುತಾ
ಧರೆಯೊಳು ಸಖರಾಯಪುರವೆಂಬ ವೈಕುಂಠದ ದೇವ ಗುರನಾಥನ ಬೇಡುತಾ|
Poojya avadootaraada venkatachala Avara paadagalige nanna bhakti poorvaka namanagalu. Hari om tatsat.
ReplyDelete