ಶರಣು ಶರಣು ಓ ಗುರುವೇ ನಿನಗೆ ಶರಣು ಶರಣು
ಪಾದಾರವಿಂದವ ನೆನೆದು ಗುರುವೇ ಶರಣು ಶರಣು|
ಎನ್ನ ಉದ್ಧಾರಕೂ ಎನ್ನ ನಿತ್ಯ ಜೀವನಕು ನೀನೇ ಕಾರಣನು ನಿನಗೆ ಶರಣು
ನಾ ಬರೆವ ಪದಗಳ ಮಾಲೆಗೆ ನಿನ್ನೊಲುಮೆಯೇ ಕಾರಣವೂ ನಿನಗೆ ಶರಣು|
ನಸುಕಿನಲಿ ಬದುಕು ಆರಂಭಿಸೆ ನಿನ್ನ ಕೃಪೆಯಲಿ ದಿನವ ಮುಗಿಸುವೆ ನಿನಗೆ ಶರಣು
ನಿನ್ನೊಲುಮೆಯು ದಾರಿ ಸುಗಮಗೊಳಿಸೆ ಇನ್ನೇನು ಬೇಕೆನಗೆ ನಿನಗೆ ಶರಣು|
ನೀನಡೆವ ನೆಲದ ಪಾದ ಧೂಳಿಯ ತಿಲಕವೆನುತ ಶಿರದಿ ಧರಿಸಿ ಎನ್ನುವೆ ಶರಣು
ನಿನ್ನ ನುಡಿ ಮುತ್ತುಗಳ ಆಲಿಸಿ ಮೈ ಮರೆವೆನು ನಿನಗೆ ಶರಣು ಶರಣು|
ಎಲ್ಲರಲೂ ನಿನ್ನ ಕಾಣುವ ಹಂಬಲ ಒಮ್ಮೆ ದರುಶನ ನೀಡೋ ನಿನಗೆ ಶರಣು
ಎನ್ನ ಪಾಪಗಳ ಮರೆತು ಮುನಿಸು ತೋರದೆ ಎನ್ನ ಹರಸೋ ನಿನಗೆ ಶರಣು|
ಲೌಕಿಕದ ಹಪಾಹಪಿಯ ನಡುವೆ ನಿನ್ನ ನೆನೆವ ಬುದ್ದಿ ನೀಡಿ ಎನ್ನ ತಿದ್ದೋ ನಿನಗೆ ಶರಣು
ಸಖರಾಯಪುರವೆಂಬ ದಿವ್ಯ ಮಣ್ಣಿನಲಿ ಜನಿಸಿಹ ನಿನಗೆ ಶರಣು ಶರಣು|
Poojya gurugalaada venkatachala Avara paadagalige naanu sharanu. Daari torisi munnadesi ashirvadisi Yellaranu. Hari om tatsat.
ReplyDelete