ಎನ್ನ ಅರಿವಿಗೆ ಬರಲಿಲ್ಲ ನೀನು ಇನ್ನೆಷ್ಟು ದಿನ ಗುರುವೇ ಕಾಯಬೇಕು ನಾನು
ದೇಹ ಶುದ್ದಿ ಸಾಲದಂತೆ ಮನ ಶುದ್ದಿ ಮಾಡಿ ಕೊಳ್ಳಲಿಲ್ಲ ಪ್ರಭುವೇ ನಾನು|
ನೋಡುವ ನೋಟದಲೂ ತುಂಬಿಹುದು ಬರೀ ಕುಹುಕದ ಭಾವವು
ಆಡುವ ಮಾತಿನಲೂ ಕಾಣಸಿಗದು ನೀ ಬಯಸುವ ಶುದ್ದ ಭಾವವು|
ಮಾಡುವ ಕರ್ಮವೂ ಬಯಸಿದೆ ಸ್ವಾರ್ಥದಾ ಹಂಬಲವು
ನಿಷ್ಕಾಮ ಕರ್ಮಕೆ ಮನ ಹಾತೊರೆದರೂ ಬಿಡದು ಚಂಚಲ ಮನವು|
ನಾನು ನಾನೆಂಬ ಭಾವವು ಮನ ತುಂಬಿ ಸಾಗಿ ನಡೆದಿದೆ ವ್ಯರ್ಥ ಜೀವನವು
ತೋರಿಕೆಯ ಪ್ರೀತಿ ಬಕುತಿಯ ಆಟ ಮೇಲಾಯಿತು ಸೋತು ಹೋಯಿತು ಮನವು|
ಸೋತು ಬೇಡುವಾಗ ನುಡಿವುದು ಮನವು ನೀನೇ ಎನ್ನ ಸರ್ವಸ್ವವೂ
ಮರು ಗಳಿಗೆಯೇ ಹಕ್ಕಿ ಹಾರಿದಂತೆ ವಾಸನೆಯ ಅರಸಿ ಓಡುವ ಎನ್ನ ಮನವು|
ಸಾಕು ಮಾಡೆನ್ನ ಈ ಬದುಕಿನ ನಾಟಕವ ನಿನ್ನ ಹಾರೈಕೆಗೆ ಕಾದಿದೆ ಜೀವವು
ಸಾಕ್ಷರಾಯಧೀಶ ಪ್ರಭುವೇ ನಿನ್ನ ಕರುಣೆಗಾಗಿ ಹಂಬಲಿಸಿ ಕೂಗಿದೆ ಮನವು|
Parama poojya gurugalaada venkatachala Avara paadagalige nanna bhakti poorvaka namanagalu. Sarvarannu uddarisi asheervadisi Kaapadi Guruvarya. Sarve jano sukinobavantu.
ReplyDelete