ಕಡಲ ಅಲೆಯಂತೆ ಬಂದೆರೆಗುವ ಭಾವನೆಗಳ ಅಲೆಯ ತಡೆಯದಾದೆನೋ
ಹಾಯಿ ನಡೆಸುತ ಸೋತ ಅಂಬಿಗನಂತಾಗಿ ಗುರುವೇ ನಿನ್ನನೇ ಮೊರೆ ಹೊಕ್ಕೆನೋ |
ತುಂಬಿದ ಕಡಲಂತೆ ಎನ್ನ ಮನವು ಗೊಂದಲದ ಗೂಡಾಗಿ ನಿನ್ನ ಕೂಗಿಹಿದೋ
ಅಲೆಗಳ ಏರಿಳಿತವೇ ಬದುಕಾದರೆ ಸರಿದೂಗಿಸುವ ಶಕ್ತಿ ನೀಡೆಂದು ಬೇಡುತಿಹುದೋ|
ಬೀಸುವ ಗಾಳಿಯು ಅಬ್ಬರದ ಅಲೆಯಾಗದೆ ಮುದ ನೀಡುವ ತಂಗಾಳಿ ಮಾಡೋ
ದೂರ ತೀರವ ಸೇರುವ ಹೋರಾಟದಿ ಆತಂಕ ತ0ದೊಡ್ಡದೆ ಪಾರುಮಾಡೋ|
ಮರಳಂತೆ ತುಂಬಿಹುದು ಕಲ್ಮಶ ಭಾವಗಳು ನನ್ನ ಮನವೆಂಬ ಕಡಲ ತೀರದಲ್ಲೊ
ಬಂಧನಗಳ ಮರಳಿಂದ ಹೂತು ಹೋಗುವ ಮುನ್ನ ಓಡೋಡಿ ಬಂದು ಕರುಣೆ ತೋರೋ|
ನೀನೊಬ್ಬ ಕರುಣೆಯಾ ಕಡಲೋ ಆಳದ ಅರಿವಿಲ್ಲದೇ ನಿನ್ನ ಬೇಡುತಿಹೆನೋ
ನಿನ್ನೊಡಲ ಅಳದಲಿ ಹುದುಗಿ ಮರೆಯಾಗುವ ಆಸೆ ಹೊತ್ತ ಜಲಚರದಂತೆ ನಾನೋ|
ಆರು ಅರಿಗಳೆಂಬ ಕಡಲ ಕಳ್ಳರ ಕೈಗೆ ಸಿಗದಂತೆ ಎನ್ನ ಬದುಕ ಹಸನು ಮಾಡೋ
ಮಂದ ಬುದ್ಧಿಯ ಪಾಮರನನು ನಾನು ಲೌಕಿಕದ ಬಲೆಯ ಜಾಲದಲಿ ಸಿಲುಕಿಹೆನೋ|
ಅದೇಕೋ ನಿನ್ನ ಬೇಡುವ ಹಂಬಲದಿ ಹುಡುಕಾಡಿ ಕಾಡಿಬೇಡಿ ನಿನ್ನನೇ ನಂಬಿಹೆನೋ
ಸಖರಾಯಪುರದ ದೊರೆಯು ನೀನು ಕನಿಕರದಿ ಹರಸೆಂದು ಕೇಳುತಾ ಬಂದು ನಿಂತಿಹೆನೋ|
Poojya venkatachala gurugalige nanna bhakti poorvaka namanagalu. Sadaa kaala Yellaranu Harasi haagu rakshe kodi gurugale. Sarve jano sukinobavantu.
ReplyDelete