ಆಡುತಿಹರೋ ಎಲ್ಲಾ ನನ್ನ ಬಕುತಿಯ ಕಂಡು ಅದು ನಿಜವಲ್ಲವೆಂದು
ಮುಸು ನಗುತಿಹರೋ ಎಲ್ಲಾ ಶುದ್ಧ ಭಾವದ ಹೊರತಾದ ಬರೀ ನಾಟಕವೆಂದೋ|
ಮಡಿಯಿಲ್ಲ ಮಂತ್ರದ ಸುಳಿವಿಲ್ಲ ಬರೀ ಕೈ ಮುಗಿದು ಸುತ್ತುವನಲ್ಲ ಎನ್ನುವರೋ
ಶಾಸ್ತ್ರದ ಅರಿವಿಲ್ಲ ನೇಮದ ಹಂಗಿಲ್ಲ ಬರೀ ಮಾತಿನಲೇ ಮುಳುಗಿನಲ್ಲ ಅನ್ನವರೋ||
ಇನ್ನೆಲ್ಲಿ ಹೋಗಲಿ ಇನ್ನೇನು ಮಾಡಲಿ ನನಗ್ಯಾರು ಗತಿ ದೊರೆಯೇ ಬರೀ ದೂರುವರೋ
ಎನ್ನ ಸಣ್ಣ ತನಕೆ ದೊರೆವ ಮನ್ನಣೆಗೆ ನಿನ್ನ ದೂರುವೆನೆಂದು ಎನ್ನ ಜರಿವರೋ|
ನೀ ತೂಗುವ ತಕ್ಕಡಿಯಲಿ ಎನಗಿಲ್ಲ ಬೆಲೆಯು ಎಲ್ಲಾ ನೋಡಿ ಹಂಗಿಪರೋ
ನೀ ಬಯಸಿದ ಬಕುತ ನಾನಲ್ಲ ಸುಮ್ಮನೆ ನಿನ್ನ ಗೆಲ್ಲದೇ ಸೋತಿಹನೆನ್ನುವರೋ|
ಎಲ್ಲರನೂ ಮನ್ನಿಸುವ ಕರುಣಾಳು ದೊರೆಯು ಸಖರಾಯಪುರದಿ ಸಿಗುವನೆಂದರೋ
ಓಡೋಡಿ ಬಂದು ನೀ ಸಿಗುವೆಯೆಂದು ಶಿರಬಾಗಿಸಿ ನಿನ್ನಮುಂದೆ ಪಾಮರ ನಿಂತೆಹೆನೋ|
No comments:
Post a Comment