ನಂಬಿಹೆ ನಿನ್ನನು ಗುರುದೇವ ಎನ್ನ ಜೊತೆಯಲಿ ಸಾಗೋ ಮಹಾದೇವ
ಶರಣೆಂಬಗೆ ಮತಿಯನೀಡಿ ಸರಿ ದಾರಿ ತೋರೋ ನಮ್ಮೊಲುಮೆಯ ಗುರುದೇವ.
ಮನಸೆಂಬ ಕುದುರೆಯ ಏರಿ ಕಂಡಲ್ಲಿ ಸಾಗುತ ದಾರಿ ಮೂಡನಾದೆ ಗುರುವೇ
ನನ್ನದಲ್ಲದ ಬಾಳ ಬದುಕಿ ಎಲ್ಲಾ ಅರಿವಿದೆಯೆಂಬ ಬ್ರಮೆಯೊಳು ಬಿದ್ದೆನು ದೊರೆಯೇ.
ನೀನಿಲ್ಲದ ಕ್ಷಣವ ಒಂದಿನಿತೂ ಊಹಿಸಲಾರೆ ಬಂಡ ಬದುಕು ಸಾಕಾಗಿದೆ ಪ್ರಭುವೇ
ನಿನ್ನ ನೆರಳಲಿ ಒಂದಾಗದಿದ್ದರೂ ಬೇಡ ನಿನ್ನ ಪಾದ ದೂಳಿಯ ಮಾಡೋ ಗುರುವೇ.
ನನ್ನಿಷ್ಟದ ಬದುಕು ಬೇಡ ನೀ ನೀಡುವ ಕರುಣೆಯ ಬದುಕು ಬೇಡುವೆ ದೊರೆಯೇ
ಶುದ್ಧ ಭಾವವ ನೀಡಿ ಒಳ ಹೊರಗೂ ಬೇಧವಿಲ್ಲದ ಮನವ ನೀಡೋ ಗುರುವೇ.
ಅರಿವಿದೆ ನನಗೆ ನನ್ನ ಕೂಗು ಬರೀ ಕಪಟ ಮನದ ಮಲಿನ ಭಾವವೆಂದು
ನಿನ್ನ ಮೊರೆ ಹೋಗುವ ವಿವಿಧ ಪರಿಯ ಕಂಡು ಮುನಿಸು ಬೇಡ ಸಖಾರಾಯ ಪ್ರಭುವೇ.
No comments:
Post a Comment