ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ ನೆನೆದರೂ ಹಳಿ ತಪ್ಪಿದ ಬಂಡಿಯಂತೆ ಓಡುತಿಹದೋ
ಕರ್ಮದ ಸುಳಿಯೊಳು ಸಿಲುಕಿ ನಲುಗಿ ನಲುಗಿ ಕೂಗುತಿಹದೋ ನನ್ನ ಗುರುವೇ.
ಮನವು ಹಿoಡಿ ಹಿಪ್ಪೆಯಾಗಿದೆ ಮುದುಡಿ ಮರುಗಿ ನಿನ್ನ ಕೂಗುತಿದೆ ಕರುಣೆಗಾಗಿ
ಕಾಣದವನಂತೆ ನಟಿಸಿ ನಗುತ ನಿಂತು ಆಟ ನೋಡಬೇಡವೋ ಕೂಗುತಿಹೆ ಬದುಕಿಗಾಗಿ.
ಕಾಡಿ ಬೇಡಿಹುದೆಲ್ಲ ನೀಡಿ ಅಹಂ ಒಡಗೂಡಿ ನನ್ನ ಬದುಕಿನ ಆಟ ನೋಡಿದೆಯಾ
ಅಡಿಗಡಿಗೂ ಎಚ್ಚರಿಕೆ ನೀಡುತ ಜೊತೆ ಜೊತೆಗೂ ನಡೆಯುತ ಬದುಕು ಕಲಿಸುವೆಯಾ.
ಯಾರಿಗೂ ಆಪ್ತನಾಗಲಿಲ್ಲ ಎಲ್ಲೂ ಸಲ್ಲಲಿಲ್ಲ ನಾನು ಎಂದೂ ನನ್ನ ಕೈ ಬಿಡಬೇಡವೋ
ಎಲ್ಲವೂ ಶಿರದಿಂದ ಎಂದೆ ಇನ್ಯಾಕೆ ತಡಮಾಡಲಿ ಶಿರವಿಟ್ಟು ಬೇಡುವೆ ಸಖರಾಯ ಪ್ರಭುವೇ.
No comments:
Post a Comment