ಗುರುನಾಥ ಗಾನಾಮೃತ
ಎಲ್ಲರೂ ನೋಡಲಿ ಎಂದು ಭಕ್ತಿ ತೋರುವುದಿಲ್ಲಾ ನಾನು
ರಚನೆ: ಆನಂದರಾಮ್, ಶೃಂಗೇರಿ
ಎಲ್ಲರೂ ನೋಡಲಿ ಎಂದು ಭಕ್ತಿ ತೋರುವುದಿಲ್ಲಾ ನಾನು
ನೀನು ಅರಿತರೆ ಸಾಕು ಗುರುವೇ ಅನ್ಯರ ಗೊಡವೆ ಬೇಡ ಎನ್ನುವೆನು|
ಮೌನದಲಿ ಹೃದಯದಲಿ ಹಂಬಲಿಸುತ ನಿನ್ನನೇ ಕೂಗುವೆನು
ದಯೆ ತೋರಿ ಹರಸು ಗುರುದೇವ ಬೇಡೆನು ಬೇರೆ ಇನ್ನೇನು|
ಬೇಡುವ ಪರಿಯಲಿ ಬೇರೆ ದಾರಿಯನು ನಾ ಕಾಣದಾದೆನು
ಬಾರವಾದ ಮನಹೊತ್ತು ಎದೆಯಾಳದಿ ಬಯಕೆ ತುಂಬಿ ಬಂದು ನಿಂತಿಹೆನು|
ಎಲ್ಲರನು ಹರಸುವ ನೀನು ಎನ್ನನೇತಕೆ ದೂರ ನಿಲ್ಲಿಸಿ ಮೌನವಾದೆ
ಭಕುತಿ ತೋರಲು ಬಾರದೇ ಪಾಮರನಂತೆ ನಿನ್ನ ಪದ ತಳದಿ ನಿಂತಿಹೆನು|
ಲಾಕಿಕದ ಲೋಕದಲಿ ಆಸೆಮೀರಿ ಬದುಕ ನಡೆಸುವ ಹಾದಿ ತೋರು
ಎನ್ನ ನಂಬಿರುವ ಜೀವಗಳ ಬಯಕೆ ತೀರಿಸಿ ಎನ್ನನು ಮುಕ್ತ ಮಾಡು|
No comments:
Post a Comment