ಮನದಿ ಭಯವೇತಕೋ ನಿನ್ನ ಇರುವಿನ ಅರಿವು ಮೂಡಿಸೇ ದೂರಾಗುವುದು ಗುರುವೇ
ಸುಪ್ತ ಮನದೊಳು ಗುಪ್ತವಾಗಿಹ ಅರಿಗಳ ಕಾಟವೋ ಅದು ಪ್ರಭುವೇ|
ಬೇಡಿದೊಡೆ ನೀ ಸಲಹುವೆಂದೆನುತ ನಾ ಮಾಡಿದ ಕಾರ್ಯಗಳು ಮನ್ನವಾಗುವುದೇ
ಮನವ ಮನ ಬಂದಂತೆ ಓಡಲು ಬಿಡದೆ ನಿನ್ನ ಅಂಕೆಯಲಿ ನಿಲಿಸೋ ಗುರುವೇ|
ನಡೆವುದಾ ನಡೆಸಿಹನು ಕಾಲನು ನಿನ್ನ ಅಭಯ ಸದಾ ಇದೆಯೆಂಬ ಭಾವ ನೀಡೋ
ನನ್ನೊಡೆಯನಾ ಸನಿಹದಿ ಸುಳಿಯದಿರಲಿ ಹುಂಬತನದ ಭಾವವೋ|
ಮರೆತು ಮತ್ತಿನಲಿ ನಡೆದೊಡೆ ಬರಲಿ ಮನದೊಳು ಭಯದ ಭಾವವು
ಎನ್ನ ಇತಿಮಿತಿಯೊಳು ಮೈಮನಸ ಬಿಗಿದಿರಿಸಿ ಪೊರೆಯೋ ಪ್ರಭುವೇ|
ಆಡಿ ನಡೆಯಲಾಗದ ಪದವ ನುಡಿಸಬೇಡ ಅಲ್ಪ ಮತಿಯವನು ನಾನಲ್ಲವೇ
ನಿನ್ನ ಪದತಳದ ಸೇವಕನ ಕಾಯುವವ ನೀನೆಂದು ನಂಬಿ ಬಂದೆನೋ ಸಖರಯಾಧೀಶನೇ|
Om namo venkatachala gurubyon namaha. Hari om tatsat
ReplyDelete