ಮನದ ಭಾವಗಳ ನಡುವೆ ನಿನ್ನ ನಾಮಕೆ ಹುಡುಕಾಡಿ ಸೋತು ನಿಂತಿಹೆನೋ
ಬರದು ಮಾಡದೆ ಮಲಿನ ಭಾವಗಳ ಒಡಲಾಳದಿಂದ ಹೇಗೆ ನಿನ್ನ ಪಡೆವೆನೋ|
ನಿನ್ನ ರೂಪ ಮಿಂಚಂತೆ ಮನದಿ ಬಂದು ಎನ್ನ ತಪ್ಪಿನ ಅರಿವು ಮೂಡಿಸಿ ಮರೆಯಾಯಿತೋ
ಮರುಕಳಿಸದಿರಲಿ ತಪ್ಪುಗಳು ನಿನ್ನ ನಾಮದ ಬಲವು ಎನ್ನ ಸದಾ ಕಾಯಲೋ|
ಏನು ಬಯಸಲಿ ಗುರುವೇ ನಿನ್ನ ಮಣ್ಣಲಿ ನಿಂತು ಕೇಳದೇ ಕರುಣಿಸಿ ಹರಸುವೆಯೋ
ಎನ್ನ ತಂದೆಯು ನೀನು ನಿನನ್ನೇ ನಂಬಿಹೆನು ಎಂದೆಂದೂ ನಿನ್ನ ಸೇವೆಗೆ ಕಾದಿಹೆನೋ|
ಯಾವ ಸೇವೆಯ ಮಾಡಲಿ ಪ್ರಭುವೇ ನಿನ್ನ ಕೃಪೆಯ ಪಡೆದು ಬದುಕು ಕಟ್ಟಲು
ಭವಬಂಧನದ ಸುಳಿಯೊಳು ಅರ್ಥ ಕಳೆದ ಬದುಕು ನಿನ್ನನೇ ನಂಬಿ ಬೇಡಿಹುದೋ|
ಸಖರಾಯಪುರದ ಮಹಾದೇವನೆ ನಿನ್ನಂಗಳದಿ ನಿಂತು ಅರಿಕೆಯಾ ಸಲ್ಲಿಸಿಹೆನೋ
ಮನ್ನಿಸಿ ಎನ್ನ ಬಾಲಿಶ ಭಾವಗಳ ತಾಕಲಾಟವ ಸ್ಥಿರ ಮನವ ನೀಡಿ ಪೊರೆಯೋ ಎಂದೆನೋ|
No comments:
Post a Comment