ಗುರುನಾಥ ಗಾನಾಮೃತ
ಬಂದೆನೋ ಬೃಂದಾವನಕೆ ಸಕರಾಯಧೀಶನ ಆಸ್ಥಾನಕೆ
ರಚನೆ: ಆನಂದರಾಮ್, ಶೃಂಗೇರಿ
ಬಂದೆನೋ ಬೃಂದಾವನಕೆ ಸಕರಾಯಧೀಶನ ಆಸ್ಥಾನಕೆ
ಬಕುತರ ಅನುದಿನ ಸಲಹುವ ಮಹಾದೇವನ ಮನೆಯಂಗಳಕೆ|
ಮನವು ಕಂಡಿತು ಅನುಪಮ ಶಾಂತಿಯ ಅವನ ಸನಿಹ ಬಂದಾಗ
ಮೂಡಿತು ಮನದಿ ಮುದದ ಅನುಭವ ಬೃಂದಾವನ
ಕಂಡಾಗ|
ಹೊತ್ತು ಬಂದಾಗ ಬವಣೆಗಳ ಕಂತೆ ನಿರಾಳವಾಯಿತು ಗುರುವ ಕಂಡಾಗ
ಮುಸುಕಿದ ಮಂಜು ಕರಗಿದಂತೆ ಮನದ ನೋವು ಅಳಿಸಿ ಹೋದಾಗ|
ಮಂತ್ರ ವೇದಗಳ ಪಠಿಸದೆ ಒಲಿವನು ಗುರುವು ಮನ ಶುದ್ದಿಯಾದಾಗ
ಹರಸುವನು ಗುರುವು ಹೃದಯದಲಿ ಹಂಬಲದ ಭಕ್ತಿ ತೋರಿದಾಗ|
ಎಲ್ಲರೊಳು ಅವನ ಕಂಡಾಗ ನಾನೆಂಬ ಬಾವ ಕರಗಿ ಹೋದಾಗ
ಅರಿವಿಲ್ಲದೆ ಬಕುತರ ಸಲಹುವನು ಕಷ್ಟ ಬಂದು ಮರುಗಿದಾಗ|
No comments:
Post a Comment