ಗುರುನಾಥ ಗಾನಾಮೃತ
ಹೊರಟಿಹೆನು ನಾನು ಗಾಣಗಾಪುರವೆಂಬ ಭೂ ಕೈಲಾಸಕೆ
ರಚನೆ: ಆನಂದರಾಮ್, ಶೃಂಗೇರಿ
ಹೊರಟಿಹೆನು ನಾನು ಗಾಣಗಾಪುರವೆಂಬ ಭೂ ಕೈಲಾಸಕೆ
ಸಕರಾಯಧೀಶನ ಅನುಮತಿ ಬೇಡಿ ಮುನ್ನಡೆದಿಹೆನು ಪುಣ್ಯ ಲೋಕಕೆ|
ಇಲ್ಲೇ ಬಾ ಎಂದಿಹನು ಹರಸುವನು ಕಳೆಯುವನು ಕರ್ಮವನು
ಭವ ಬಂಧನವ ಕಳೆವನು ಮುಕುತಿಯ ದಾರಿಯ ತೋರುವನು|
ಸುಲಭದಿ ದೊರೆವುದಿಲ್ಲಾ ಗುರುವಿನ ಕರುಣೆಯು ನೀ ಅರಿಯೊ
ನೀಡಿಹನು ಸಕರಾಯಧೀಶನು ಒಂದವಕಾಶವನು ಮಹಾದೇವನು|
ಬರೀ ಬೇಡುವುದೊಂದೆ ಕಾಯಕವಲ್ಲಾ ನೀಡುತ ಬದುಕೆಂದನು
ದಿವ್ಯ ಗುರು ಸನ್ನಿಧಿಯಿದು ಮಲಿನ ಮನವ ಹಸನು ಮಾಡಿ ಬದುಕೆಂದನು |
No comments:
Post a Comment