ಗುರುನಾಥ ಗಾನಾಮೃತ
ಏನೂ ಅರಿಯದಾದೆನೋ ಗುರುವೇ ಏನೂ ತಿಳಿಯದಾದೆನೋ
ರಚನೆ: ಆನಂದರಾಮ್, ಶೃಂಗೇರಿ
ಏನೂ ಅರಿಯದಾದೆನೋ ಗುರುವೇ ಏನೂ ತಿಳಿಯದಾದೆನೋ
ನಿನ್ನ ಬಜಿಸುವ ಪರಿ ತಿಳಿಯದಾದೆನೋ ದಾರಿ ತೋರಿ ಹರಸು ಎನ್ನನು|
ಮನವ ನಿಲ್ಲಿಸಿ ನಿನ್ನ ನೆನೆವ ರೀತಿ ಎನಗೆ ತಿಳಿಯದಾಯಿತೋ
ಕೂಗಿ ಕರೆವ ಬಕುತಿ ತೋರಿ ನಿನ್ನ ಬಜಿಸಲಾರೆನೋ ಗುರುವೇ|
ಆಡಂಬರದ ಬಕುತಿ ತೋರಲಾರೆನೋ ನಿಜ ಬಕುತಿಯ ಅರಿಯಲಾರೆನೋ
ಮಲಿನ ಮನವ ಶುದ್ದಿ ಮಾಡಿ ನಿನ್ನ ಬಜಿಸುವ ಶುದ್ದ ಮನವ ನೀಡಲಾರೆಯಾ|
ಕಾಮ ಮೋಹ ತುಂಬಿ ತನುವು ಮನವು ಹಳಸಿ ಹೋಗಿದೆ
ಕಪಟ ಕುಹುಕ ಬಾವ ತುಂಬಿ ಹೃದಯ ಬಲು ಬಾರವಾಗಿದೆ|
ಮಂದ ಮತಿಯು ನಾನು ಪೊಳ್ಳು ಮಾತುಗಳ ಆಡುತಿಹೆನೋ
ಪಾಮರನು ನಾನು ನಿತ್ಯ ಬದುಕ ಬವಣೆ ಮೀರಿ ನಿಲ್ಲಲಾರೆನೋ|
ಎಲ್ಲರ ಸಲಹುವ ಗುರುವೇ ನಮ್ಮ ಮಹಾದೇವ ನೀನಲ್ಲಾವೇನು|
ಸಕರಾಯಪುರದ ಅರಸನು ನೀನು ಕರುಣಿಸಿ ಹರಸು ಎನ್ನನು|
No comments:
Post a Comment