ಮನವು ಬಯಸಿದೆ ನಿತ್ಯ ಸುಖವು ನಿನ್ನ ಭಜಿಸದೆ ಅದೆಲ್ಲಿ ದೊರೆವುದು ಹೇಳು ಗುರುವೇ
ಮಿಥ್ಯಎಂಬ ಬ್ರಮೆಯೊಳು ಮನವು ಮಿಂದು ಲೌಕಿಕದ ಕೂಪದೊಳು ನಿಂತೆನಲ್ಲವೇ|
ನೋವು ಬೇಡ ಹಸಿವು ಬೇಡ ಮಲಿನ ಮನವು ಸೌಖ್ಯ ಬಯಸಿದೆ
ಒಮ್ಮೆ ನಿನ್ನ ಸಂಗ ಬಯಸಿ ಬದುಕು ನಡೆವ ಹಾದಿ ದಿಕ್ಕ ಬದಲಿಸಲಾಗದೇ|
ಏನೋ ಬಯಸಿ ವೇಷಧರಿಸಿ ಮನದ ತುಂಬ ಆಸೆ ಇರಿಸಿ ನಿನ್ನ ಕಾಣ ಬಂದೆನೋ
ಅಂತರಾತ್ಮ ಶುದ್ಧವಿಲ್ಲ ಶಬ್ದದಲ್ಲೂ ಬಕುತಿಯಿಲ್ಲ ಇನ್ನು ನಿನ್ನ ಹೇಗೆ ಪಡೆವೆನೋ|
ಮನದ ತುಂಬ ಕಾಮ ಹೊತ್ತು ತೋರಿಕೆಯ ಭಕುತಿ ಬೀರಿ ನಿನ್ನ ಮುಂದೆ ನಿಂತೆನೋ
ನಾಲ್ಕು ಸಾಲು ಪದವ ಗೀಚಿ ಮಳ್ಳ ಮನದ ಆಸೆ ಅದುಮಿ ನಿನಗೆ ಶರಣು ಎಂದೆನೋ|
ನಿತ್ಯ ಬದುಕಿನಲ್ಲಿ ಸ್ವಾರ್ಥದ ಬೆನ್ನೇರಿ ನಿನ್ನ ಸೇವೆಗೈವ ವೇಷದರಿಸಿಹೆನೋ
ಪಾಪ ಪುಣ್ಯಗಳ ಅರಿವಿದ್ದರೂ ಬಲು ಹುಂಬತನದಿ ಮೆರೆಯುತಿಹೆನೋ|
ಇನ್ಯಾವ ರೀತಿಯಲಿ ಭಜಿಸಿ ಪೂಜಿಸಲಿ ನಿನ್ನ ಎನ್ನ ಮನ್ನಿಸಿ ಕರುಣಿಸುವ ಮನ ಬಂದಿಲ್ಲವೇ
ಸಖರಾಯಪುರದ ಸರದಾರ ನೀನು ಒಮ್ಮೆ ತುಂಬು ಮನದಿ ಎನ್ನ ಹರಸಬಾರದೇ|
Sakaraayapurada venkatachala avadootarige nanna bhakti poorvaka namanagalu. Hari om tatsat.
ReplyDelete