ಏನೆಂದು ಕೊಂಡಾಡಲಿ ಗುರುವೇ ನಿನ್ನ ಲೀಲೆಯ ಈ ಮೂಡ ಏನೂ ಅರಿಯ
ಬಕುತರ ಬಾಯಲಿ ಕೇಳುವೆನು ನಿನ್ನ ನಂಬಿದವರ ಸಲಹಿದ ಚರಿತೆಯ|
ಈ ನನ್ನ ಜೀವವು ಕಲ್ಲು ಬಂಡೆಯಂತೆ ನಿನ್ನ ಸೇವಿಸಿದೊಡೆ ತಿದ್ದಿ ತೀಡುವಿಯಂತೆ
ಎನ್ನ ಮನವು ಕಲ್ಲು ಮುಳ್ಳಿನ ನೆಲವು ನಿನ್ನ ನೆನೆದೊಡೆ ಹಸನು ಮಾಡುವಿಯಂತೆ|
ಮನದಿ ತುಂಬಿಹುದು ಮಲಿನ ವಾಸನೆಯು ನಿನ್ನ ನಾಮ ಜಪಿಸೆ ಶುದ್ಧವಾಗುವದಂತೆ
ನೋಡುವ ನೋಟದಲಿಹ ಕಾಮ ಭಾವನೆ ನಿನ್ನ
ನಾಮ ನುಡಿದೊಡೆ ದೂರಾಗುವುದಂತೆ|
ಅಲ್ಪ ಮತಿಯು ನಾನು ನಿನ್ನ ಸಂಗ ಬಯಸಿ ಸೋತೆನು ಕೂಗಿದೊಡೆ ಬರುವಿಯಂತೆ
ಅವರಿವರ ವಿಷಯ ಮೈಲಿಗೆಯೆಂದರೂ ಅದರಲೇ ಮುಳುಗಿಹ ಎನ್ನ ಎಚ್ಚರಿಸುವಿಯಂತೆ|
ತಂದೆ ನೀನೆಂದು ನಿನ್ನನೇ ನಂಬಿಹೆನು ನಿನ್ನಂಗಳದಿ ಮೊರೆಯಿಡುತಿಹೆನು ಎಲ್ಲಿರುವೆ ಕಾಣದಂತೆ
ಸಖರಾಯಪುರದ ದಿವ್ಯ ದೇವನು ನೀನು ಮುನಿಸು
ತೋರದೆ ದರುಶನ ನೀಡಿ ಹರಸೋ ತಂದೆ|
No comments:
Post a Comment