ನಿತ್ಯ ಆನಂದ ನೀಡುವ ಗುರುನಾಥನ ಸ್ತುತಿಯ ಅನವರತ ಮಾಡೋಣ
ಭವ ಬಂಧನ ಕಳಚುವ ನಮ್ಮ ಗುರುದೇವನ ಸದಾ ಭಜಿಸೋಣ|
ಸುಮ್ಮನೆ ಕಾಲ ಕಳೆಯದೇ ಅವನದೇ ಧ್ಯಾನದಲಿ ಮುಳುಗೋಣ
ನಿತ್ಯ ಕೂಳಿನಾ ಚಿಂತೆ ಅವನಿಗರ್ಪಿಸಿ ಚಿಂತೆ ಮರೆತು ಹಾಡೋಣ|
ಹುಟ್ಟಿಯಾಗಿದೆ ದಿನವ ದೂಡದೆ ಅವನಿತ್ತುದ ಸೇವಿಸಿ ಧನ್ಯರಾಗೋಣ
ಮುಪ್ಪು ಬರುವುದರಲಿ ಅವನಿಗೊಪ್ಪುವ ರೀತಿ ಬದುಕಿ ಕರುಣೆ ಪಡೆಯೋಣ|
ಗುರುವಿನ ದರುಶನ ಒದಗಿದರೆ ತೋರಿದ ದಾರಿ ಹುಡುಕಿ ನಡೆಯೋಣ
ತತ್ವವರಿತು ನಡೆದು ಗುರಿವಿನ ಪ್ರೀತಿ ಗಳಿಸೆ ಜೀವನ ಧನ್ಯ ಎನ್ನೋಣಾ|
ನಾನೊಬ್ಬನೇ ಗುರುವಿನ ಗುಲಾಮನೆನದೇ ಎಲ್ಲರೊಡಗೂಡಿ ಸೇವೆ ಮಾಡೋಣ
ನನ್ನದಲ್ಲದ ಬದುಕು ಅವನಿತ್ತ ಭಿಕ್ಷೆ ಎನುತ ಅಹಂ ಮರೆತು ದಿನವ ಕಳೆಯೋಣ|
ಎಲ್ಲೋ ಹುಟ್ಟಿ ಬದುಕೆಲ್ಲೊ ನಡೆಸೋ ಈ ಜೀವಕೆ ನೀನೇ ರಕ್ಷಕ ಎನ್ನೋಣ
ಸಖರಾಯಪುರದ ಮಹಾದೇವನ ಚರಣ ಕಮಲದ ಧೂಳು ನಾವಾಗಿ ಬದುಕೋಣ|
No comments:
Post a Comment