ಬರಿ ಮಾತಲಿ ಬೇಡುತ ಗುರುವೆಂದೊಡೆ ಅವ ಸ್ವೀಕರಿಸುವೆನೆ ಎನ್ನಾ
ಸರಿ ದಾರಿಯಲಿ ಸಾಗದೆ ಕೂಗಿದೊಡೆ ಬಂದು ಹರಸುವೆನೇ ಎನ್ನಾ|
ಮುಖವಾಡವ ಕಳಚದೆ ಬರೀ ಪದಗಳಲೇ ಬೇಡಿದೊಡೇ ಒಪ್ಪುವನೇ ನನ್ನ
ಹುಚ್ಚು ತನವ ಭಕುತಿ ಎನುತ ನನ್ನಿಷ್ಟದಂತೆ ಕೂಗಿದೊಡೆ ಹರಸುವೆನೇ ಎನ್ನ|
ಅವನಿತ್ತುದ ಒಪ್ಪದೇ ಇನ್ನೇನನೋ ಬೇಡುವ ಆಸೆ ಹೊತ್ತವನ ಹತ್ತಿರ ಸೇರಿಸುವನೆ ಎನ್ನ
ಕರುಬು ತನದಿ ಎಲ್ಲಾ ನನ್ನದೆನುವವನ ಬೇಡಿಕೆಯ ಒಪ್ಪಿ ಕರುಣಿಸುವನೇ ನನ್ನ|
ಪರರ ನಡೆನುಡಿಯ ಎತ್ತಿ ಆಡುವ ಈ ನಾಲಗೆಯ ಪದವ ಕೇಳಿ ದೂರ ತಳ್ಳನೇ ಎನ್ನ
ಅಲ್ಪ ಮತಿಯು ನಾನಾದರೂ ಅನ್ಯರ ಡೊಂಕ ಹುಡುಕುವವನ ಕರುಣಿಸುವೆನೆ ನನ್ನ|
ನಾನೊಬ್ಬ ಬಕುತನೆನುತ ನಿಜ ಬಕುತರ ಹಳಿವಗೆ ದಾರಿ ತೊರೆಂದರೆ ಒಪ್ಪುವನೇ ಗುರುನಾಥ
ಸಖರಾಯಪುರದ ಹಾದಿ ಸವಿಸಿ ನಿನ್ನ ಪಾದದಡಿ ಶಿರವಿಟ್ಟು ಬೇಡುವೆನು ಕರುಣಿಸೋ ಗುರುನಾಥ|
No comments:
Post a Comment