ಯಾರೇ ಅವರು ನೋಡಮ್ಮ ಯಾರೇ ಆ ಗುರುವರ ನೋಡಮ್ಮ
ಅವ ನಮ್ಮವನಲ್ಲವೇ ಸಖರಾಯಪುರದ ಮಹಾದೇವನಲ್ಲವೇನಮ್ಮ|
ಗದರಿದರೂ ಗುರಿ ತೋರುವ ಸದ್ಗುರು ಅವನಲ್ಲವೇನಮ್ಮ
ತೋರುವ ಪ್ರೀತಿಗೆ ಮಿಗಿಲಿಲ್ಲ ಅದ ಪಡೆದವ ಧನ್ಯನಲ್ಲವೇನಮ್ಮ|
ಯಾರ ಹಂಗಿಗೂ ಒಳಗಾಗದ ಮಹಾಸಾಧಕ ನಮ್ಮ ಸದ್ಗುರುವಲ್ಲವೇನಮ್ಮ
ಒಳ ಹೊರಗಿನ ಭಾವ ಒಂದಾದರೆ ಅವ ಒಪ್ಪಿ ಹರಸುವನಮ್ಮ|
ಆರು ಅರಿಗಳ ಮೆಟ್ಟಿ ನಿಂತ ಧೀಮಂತ ನೇರ ನುಡಿಗಳ ಶ್ರೀಮಂತನಮ್ಮ
ಅಹಂ ಅಳಿಯದ ಹೊರತು ಎಲ್ಲಾತೊರೆದ ಹೊರತು ದೊರೆಯನಮ್ಮ|
ಭವರೋಗ ವೈದ್ಯನಮ್ಮ ಭವಬಂಧನವ ಕಳೆವ ಮಹಾ ಸಂತನಮ್ಮ
ನಂಬಿ ನಡೆದರೆ ಎಂದಿಗೂ ಯಾರನೂ ಕೈ ಬಿಡದೆ ಹರಸಿ ಸಲಹುವನಮ್ಮ|
Guruvarya venkatachala nimma paadagalige nanna saashtaanga pranaamagalu. Yellaranu sadaa kaala Harasi asheervadisi Kaapadi Guruvarya. Sarve jano sukinobavantu.
ReplyDelete