ದಯಾಮಯನೋ ಕರುಣಾಮಯನೋ ನನ್ನ ಗುರುನಾಥನು
ವಿಶ್ವ ಮಾನ್ಯನೋ ಸರ್ವ ಜನ ಪೂಜಿತಾನೋ ನನ್ನ ಮಹಾದೇವನು|
ಏನು ಬೇಡಲಿ ನಾನು ಅವನ ಮುಂದೆ ಬೇಡದಲೇ ಕಷ್ಟವ ನೀಗುವನೋ
ಲೌಕಿಕ ಜೀವನದ ಬೇಕು ಬೇಡಗಳ ನಡುವೆ ಒಮ್ಮೆ ಆತನ ಸ್ಮರಿಸುವೆನೋ|
ದರುಶನ ಸುಲಭವಲ್ಲವೋ ದೇವನ ಸಭೆಯೊಳು ಒಬ್ಬನಾದರೆ ಬಹು ಪುಣ್ಯವೋ
ಪ್ರಸಾದ ದೊರೆತರೆ ನಿರಂತರ ಅನ್ನಪೂರ್ಣೆಯ ಕರುಣೆ ದೊರೆತಂತೆಯೋ|
ಸಭೆಯೊಳು ಗರ್ವಹರಣವಾದರೆ ಧನ್ಯವೋ ಬಲು ಪುಣ್ಯವೋ
ಮುನಿಸಿನಿಂದ ನುಡಿಯ ಕೇಳ್ದರೆ ಎಲ್ಲಾ ಕರ್ಮದ ಹರಣವೋ ಬಲು ಭಾಗ್ಯಾವೋ|
ಮಗುವಂತೆ ಎಚ್ಚರಿಸಿ ಬಿರುನುಡಿಯಾಡದೆ ತಪ್ಪು ತಿದ್ದಿ ಸರಿ ದಾರಿತೋರುವನೋ
ಜಾತಿ ವಿಜಾತಿಗಳ ಎಲ್ಲೆಮೀರಿ ಸುಜ್ಞಾನಿಗಳ ಸಂಗದೊಳು ಕಾಣಿಸುವನೋ|
ಸಾದು ಸಂತರ ಚಿಂತೆ ದೂರ ಮಾಡುತಾ ಸರ್ವರ ಹಿತ ಕಾಯುವನೋ
ಗುರು ಹಿರಿಯರ ಸೇವೆಯೇ ಬದುಕೆನ್ನುತ ನಂಬಿದವರ ಪೊರೆಯುವನೋ|
Poojya venkatachala gurugalige nanna bhakti poorvaka namanagalu. Swamy yellarigu e kantaka dinda mukthi kodi haagu rakshe, samaadhana karunisi asheervadisi Gurudeva.Hari om tatsat.
ReplyDelete