ನೀನೇ ನನ್ನ ದೊರೆಯೆಂದು ನನ್ನ ಈ ಅಹವಾಲು ನೀಡುತಿಹೆನೋ
ಸರಿ ತಪ್ಪು ನಿರ್ಣಯಿಸಿ ನಿನ್ನ ಮನೆಯಂಗಳದ ನ್ಯಾಯ ತಿಳುಸೋ ಗುರುವೇ|
ಏನೂ ಅರಿಯದ ನಾನು ನಿನ್ನ ಬಕುತನೆಂದು ಬೀಗುತಾ ಬದುಕುವುದು ಸರಿಯೇ
ಜನುಮಗಳ ಕರ್ಮದ ಹೂರೆ ಹೊತ್ತು ಸಲಹೆಂದು
ಮೊರೆ ಇಡುವುದು ಸರಿಯೇ|
ವಿಷಯದ ಬೆನ್ನತ್ತಿ ಬದುಕು ಕಳೆವ ನಾನು ನಿನ್ನ ನೆನೆವುದು ಸರಿಯೇ
ಪರರ ಸ್ವತ್ತಿಗೆ ಹಂಬಲಿಸುವ ಮನ ದಾನ ಮಾಡಿದೆನೆಂದು ಬೀಗುವುದು ಸರಿಯೇ|
ಕರಗಳು ಮಲಿನಗೊಂಡಿರುವಾಗ ನಿನ್ನ ಪೂಜಿಸುವುದು ಸರಿಯೇ
ಕಲ್ಮಶ ತುಂಬಿದ ಮನ ಹೊತ್ತು ನಿನ್ನ ಬಜಿಸುವ ಪರಿಯು ಸರಿಯೇ|
ನೋಡುವ ನೋಟದಲಿ ಕಪಟ ತುಂಬಿಹುದು ನಿನ್ನ ದರುಶನ ಪಡೆವುದು ಸರಿಯೇ
ಶಿರದೊಳು ಬರೀ ಕಾಮವಾಸನೆ ಹೊತ್ತು ನಿನ್ನ ಪಾದಕೆ ಶಿರಭಾಗುವುದು ಸರಿಯೇ|
ಅನ್ಯರ ಕೂಳಿಗೆ ಕನ್ನ ಹಾಕುವ ಮನ ನಿನ್ನೊಳು ಸೇರುವುದು ಸರಿಯೇ
ನಿಜ ಬಕುತರ ಮನವನರಿಯದೇ ಅವರ ಭಕುತಿ ಜರಿವುದು ಸರಿಯೇ|
ಹೀಗೆಂದು ಮರುಗುವ ಮನವ ತಹಬಂದಿಗೆ ತಂದು ಹರಸೋ ನನ್ನ ದೊರೆಯೇ
ಸಖರಾಯಪುರದ ಅರಸನು ನೀನು ಇನ್ಯಾರನು ಬೇಡಲಿ ಹೇಳೋ ಗುರುವೇ|
Poojya venkatachala gurugalige nanna poojya namanagalu. Yellaranu sadaa kaala Harasi Kaapadi asheervadisi uddarisi swamy. Hari om tatsat.
ReplyDelete