ಆಲಿಸೋ ಎನ್ನ ಮನದ ಮೊರೆಯ, ಪರಿ ಹರಿಸೋ ಎನ್ನ ಬದುಕ ಬವಣೆಯ
ನಿತ್ಯ ನಿನ್ನ ಸೇವಿಪ ಬಕುತರಂತಲ್ಲ ನಾನು ಎಲ್ಲೋ ಹಾದಿ ತಪ್ಪಿದ ಪಾಮರನೋ|
ಎಲ್ಲಾ ಅರಿತರೂ ಏನೂ ಅರಿವಿಲ್ಲದಂತೆ ನಟಿಸಿ ಮನದ ಅಹಂ ಮುರಿಯುವೆ
ಎಲ್ಲವನೂ ನೀಡಿ ಇನ್ನೂ ಸಾಲದೆಂಬ ಮನವ ನೀಡಿ ಕಾಡಬೇಡವೋ|
ಎಲ್ಲ ನಿನ್ನದಾಗಿರುವಾಗ ನಾನು ಕೊಟ್ಟೆನೆಂಬ ಬಾವ ತುಂಬಿ ನುಡಿಸಬೇಡವೋ
ನಿನ್ನಣತಿಯಿಲ್ಲದೆ ಹುಲ್ಲು ಕಡ್ಡಿಯೂ ಅಲುಗದು ನಾ ಮಾಡಿದನೆಂಬ ಬಾವ ಬೇಡವೋ|
ನಾ ದೊಡ್ಡವನೆಂಬ ಭಾವ ತುಂಬಿ ಎನ್ನ ಆಡಿಸಿ ಬೀಳಿಸ ಬೇಡವೋ
ಎಲ್ಲವರಿಗಿಂತ ನಾ ಸಣ್ಣವನೆಂಬ ಭಾವ ಮೂಡಿಸಿ ಮನತುಂಬಿ ಎನ್ನ ಹರಸೋ |
ಬಣ್ಣಗಳ ಚಿತ್ತಾರ ಮನದಿ ಮೂಡಿಸಿ ನಿನ್ನ ನೆನೆವ ಮನದ ಹಾದಿ ತಪ್ಪಿಸ ಬೇಡವೋ
ಮುನ್ನಡಿ ಇಡುವ ಮುನ್ನ ಎನ್ನ ಮನದಿ ನಿನ್ನ ನಾಮವು ಅಳಿಯದಂತೆ ನೋಡೋ|
Venkatachala gurugalige nanna poojya namanagalu. Yellaranu sadaa kaala Harasi asheervadisi Kaapadi. Hari om tatsat.
ReplyDelete