ಬೆಚ್ಚಿ ಬಿದ್ದೆನೋ ಬೆವೆತು ಹೋದೆನೋ ನಿನ್ನ ನಾಮ ಮರೆತು ಮೂಡನಾದೆನೋ
ಇನ್ನು ತಾಳಲಾರೆನೋ ಗುರುವೇ ಕಾಯಲಾರೆನೋ ನಿನ್ನ ದರುಷನಕೆ ಬೇಡಿ ಬಂದೆನೋ|
ಭಕುತಿ ಗೊತ್ತಿಲ್ಲ ನೀತಿ ನಿಯಮದ ಅರಿವಿಲ್ಲದವ ನಿನ್ನ ಬೇಡುತಿಹೆನೋ
ಕೈ ಜೋಡಿಸದೆ ತನುವು ಬಾಗಿಸದೆ ನಿನ್ನ ಶಕುತಿಯ ಅರಿವಿಲ್ಲದೇ ಕೇಳುತಿಹೆನೋ|
ನಿನ್ನ ನಾಮವ ಸೇವಿಸದೇ ನಿನ್ನ ಪಾದಪದುಮ ಪಿಡಿಯದೆ ಸಲಹು ಎಂದೆನೋ
ಮನದೊಳು ನಿನ್ನ ಮೂರುತಿ ನಿಲಿಸದೆ ಹೃದಯದಿ ನಿನ್ನ ನಾಮವಿಲ್ಲದೆ ಹರಸು ಎಂದೆನೋ|
ಲೌಕಿಕ ಬದುಕಿನ ವಾಸನೆಗಳ ಜೊತೆ ಕಾಲ ಕಳೆದು ಕಾಲಹರಣ ಮಾಡಿ ಮೂಡನಾದೆನೋ
ಅಲ್ಪ ಮತಿಯಹೊತ್ತು ಅಲ್ಪ ಸಂಗಗಳಿಸಿ ಬದುಕ ಬರಡು ಮಾಡಿಕೊಂಡೆನೋ|
ಲೋಭಿಯಂತೆ ಆಸೆ ಹೊತ್ತು ನಿತ್ಯ ಬದುಕಿನಾ ನರಕದಲ್ಲಿ ಎಡವಿ ಬಿದ್ದೆನೋ
ಅಲ್ಪ ಸುಖದ ಬೆನ್ನಹತ್ತಿ ಮುಸುಕು ಕವಿದ ಬಾಳಿನಲ್ಲಿ ಕಳೆದು ಹೋದೆನೋ|
ನೀನೇ ಗುರುವು ನೀನೇ ಸರ್ವವೂ ಎಂದು ನುಡಿಯಲು ನಾನು ಅರ್ಹನಲ್ಲವೋ
ಸಖರಾಯಪುರದ ಮಹಾದೇವನೇ ಬೇಡದಲೇ ಎಲ್ಲವನೂ ಅರಿಯುವನೋ|
Om namo sakaraayapurada venkatachala avadootarige nanna bhakti poorvaka namanagalu. Hari om tatsat.
ReplyDelete