ತೃಣ ಮಾತ್ರದ ಯೋಗ್ಯತೆಯಿರದೆ ನಿನ್ನ ಸ್ತುತಿಸಿಹೆನು ಪಾಮರನು ನಾನು
ಪಾಪದ ಹೊರೆ ಹೊತ್ತು ನಡೆಯಲಾರದೆ ತಲೆ ಎತ್ತದೆ ಬೇಡುತಿಹೆನು ನಾನು|
ಅಂತರಾಳದ ಅಳದಲಿ ಬರೀ ಸುಳ್ಳುಕಪಟದ ಬಕುತಿಯ ಅಲೆಗಳು
ತೋರಿಕೆಯ ನಿತ್ಯ ಬದುಕಿನಲಿ ಆಡಂಬರದ ಹುಸಿ ತಂತ್ರಮಂತ್ರಗಳು|
ಅಂಜಿಕೆಯ ಮನಹೊತ್ತು ತನುವ ಬಾಗಿಸಿ ಬೇಡುವಾಪರಿ ಟೊಳ್ಳು ಭಾವಗಳು
ಮನದ ತುಂಬಾ ತುಂಬಿಹಾ ಮೆಟ್ಟಿ ನಿಲ್ಲದಾ ಕಾಮನೆಗಳ ಅಲೆಗಳು|
ನಾನು ನಾನೆಂಬ ಭಾವವ ಮನದಿಂದ ಕಳಚದೆ ಮಾಡುವಾ ಸೇವೆಗಳು
ಅನ್ಯರಿಗಿಂತ ಮಿಗಿಲೆಂಬ ಭಾವದಿ ಸಲ್ಲಿಪ ಧಾನ ಧರ್ಮದ ಮುಖವಾಡಗಳು|
ಯಾರಿಗೂ ತೋರಿಪದೇ ನಿನ್ನ ಸೇವೆಯೊಳು ಮನ ನಿಲ್ಲಿಸೆಂಬ ಕೋರಿಕೆಯೊಳು
ಎಲ್ಲಾ ಬಲ್ಲ ಭಗವಂತನು ಸಖರಾಯಧೀಶನು ಎನ್ನ ಮನ್ನಿಸುವನೆಂಬ ಬಯಕೆಯೊಳು|
Om namo venkatachala gurubyon namaha. Kaapadi asheervadisi. Hari om tatsat.
ReplyDeleteNamo Venkatachala gurubyon namaha. Avara paadagalige nanna namanagalu. Hari om tatsat.
ReplyDelete