ಒಟ್ಟು ನೋಟಗಳು

Sunday, October 14, 2018

ಗುರುನಾಥ ಗಾನಾಮೃತ 
ಎಲ್ಲವೂ ಅವನದೆಂದಿರಿ ಕಾಣುವ ಮತ್ತೆಲ್ಲಾ ಮಿಥ್ಯವೆಂದಿರಿ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲವೂ ಅವನದೆಂದಿರಿ ಕಾಣುವ ಮತ್ತೆಲ್ಲಾ ಮಿಥ್ಯವೆಂದಿರಿ ಗುರುವೇ
ನಿಮ್ಮ ನಂಬಲು ಬೇರಾವ ಸತ್ಯದ ಅರಿವಿನಗೊಡವೆ ಎನಗೆ ಬೇಡ ಗುರುವೇ|

ನನ್ನದೆಂಬುದು  ಬರೀ ಭ್ರಮೆಯು ಎರಡೂ ಒಂದಾದಾಗ  ಏನೂ ಇಲ್ಲವೋ
ಗುರುವಾಕ್ಯ ಹೊರತು ಬೇರೇನು ಬೇಡವೋ ಎಮಗೆ ನೀವೇ ಎಲ್ಲವೂ|

ಎಂಟು ಮೆಟ್ಟಿಲ ಏರಿ ಗುರುಕರುಣೆ ತೋರಿದೊಡೆ ಎಲ್ಲಾ ಲೀನವೋ
ಸದ್ಗುರು ದೊರೆತು ಕೈ ಹಿಡಿದು ಅಹಂ ಅಳಿಸಿದೊಡೆ ಅವನಲೇ ಎಲ್ಲವೂ|

ಶುದ್ದ ಮನವೊಂದೆ ಮಹಾದೇವನಿಗೆ ಪ್ರಿಯವೆಂದಿರಿ ಗುರುವೇ
ಎನ್ನ ಮನದ ಮಾತಿನಲಿ ನಿತ್ಯ ನಿನದೇ ಧ್ಯಾನ ತುಂಬಿರಲಿ ಗುರುವೇ|

ಬೇಡುವ ಮನದಾಳದಿ ತುಂಬಿರಲಿ ನಿಸ್ವಾರ್ಥದ  ಬೇಡಿಕೆಗಳು
ಉಸಿರು ಉಸಿರಲೂ ತುಂಬಿರಲಿ ನಿಮ್ಮ ನಾಮವು ಗುರುವೇ|

No comments:

Post a Comment