ಒಟ್ಟು ನೋಟಗಳು

Sunday, October 14, 2018

ಗುರುನಾಥ ಗಾನಾಮೃತ 
ಶ್ರೀಪಾದನನು ನೆನೆಯದ ಮನವು ಯಾಕೆ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಶ್ರೀಪಾದನನು ನೆನೆಯದ ಮನವು ಯಾಕೆ
ಗುರುಪಾದವನು ನಮಿಸದ ಜೀವ ಯಾಕೆ ।।

ಇಹದ ಸುಖವನು ಬೇಡುವ ಕೈಗಳೇಕೆ
ದಾನವ ಮಾಡದ ಸಿರಿತನವೇಕೆ ।
ಗುರುಮೂರುತಿಯ ಕಾಣದ ಕಂಗಳು ಯಾಕೆ
ಅವರ ಮಾತನು ಆಲಿಸದ ಕಿವಿಗಳು ಯಾಕೆ ।। ೧ ।।

ಶ್ರೀಚರಣಕೆ ಬಾಗದ ಶಿರವು ಏಕೆ
ಗುರುವನು ಪೊಗಳದ ನಾಲಿಗೆ ಏಕೆ ।
ಶಬ್ದಗಳಲಿ ಅವನ ಕಾಣದ ಪಾಂಡಿತ್ಯವೇಕೆ
ಜೀವದೊಡೆಯನ ಸದಾ ಸ್ಮರಿಸದ ಜನುಮವೇಕೆ ।। ೨ ।।

ಸ್ಥಿರಚಿತ್ತವಿರದ ತಪವು ಯಾಕೆ
ಗಣನೆಯೇ ಮಾಡುವ ಜಪವು ಯಾಕೆ ।
ಆಚಾರವಿಲ್ಲದ ನಾಲಿಗೆ ಏಕೆ
ಸ್ಥಿರಮುಕ್ತಿಸುಖವ ಬೇಡದ ಜೀವನವೇಕೆ ।। ೩ ।।

No comments:

Post a Comment