ಗುರುನಾಥ ಗಾನಾಮೃತ
ವರ್ಣಿಸಲೆಂತೋ ನಿನ್ನ ಮಹಿಮೆಯ ದೇವನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ವರ್ಣಿಸಲೆಂತೋ ನಿನ್ನ ಮಹಿಮೆಯ ದೇವನೇ
ಪದಗಳೇ ಸಾಲದಾಗಿದೆ ಮಹಾಮಹಿಮನೇ ||
ಮನುಜರೂಪದಿ ಕಾಣುತಿಹ ದೇವನೇ
ನಮ್ಮ ದೈವವೇ ನೀನಾಗಿರುವೆ ಪ್ರಭುವೇ |
ಅವಿದ್ಯೆಯ ಕರಗಿಸುವ ಗುರುವೇ
ಬ್ರಹ್ಮತತ್ತ್ವವ ಬೋಧಿಸುವ ಬಂಧುವೇ || ೧ ||
ಯಶೋದೆಗೆ ಕೃಷ್ಣನು ಬ್ರಹ್ಮಾಂಡ ತೋರಿದ ರೀತಿ
ಅಚ್ಯುತನು ಅರ್ಜುನಗೆ ದಿವ್ಯಕಂಗಳಾ ನೀಡಿದ ರೀತಿ |
ಅಂತರಂಗದಾ ಕಣ್ಣು ತೆರೆಯೋ ಪ್ರಭುವೇ
ಅರಿವಿನ ಸಾಕ್ಷಾತ್ಕಾರ ಮಾಡಿಸೋ ಬಂಧುವೇ || ೨ ||
No comments:
Post a Comment