ಒಟ್ಟು ನೋಟಗಳು

Sunday, October 14, 2018

ಗುರುನಾಥ ಗಾನಾಮೃತ 
ಗಡ್ಡಧಾರಿ  ಇವನು ತುಂಡು ದಟ್ಟವನು  ಉಟ್ಟವನು ಯೋಗಿ ಇವನು
ರಚನೆ: ಆನಂದರಾಮ್, ಶೃಂಗೇರಿ  


ಗಡ್ಡಧಾರಿ  ಇವನು ತುಂಡು ದಟ್ಟವನು  ಉಟ್ಟವನು ಯೋಗಿ ಇವನು
ಶಿವನ ಅವತಾರ ಇವನು ಎಲ್ಲೆಲ್ಲೂ ಇಹನು ಇವನೇ ಸಾಂಬಶಿವನು|

ಇಲ್ಲೇ ಇರುವನೆಂದು ಬಲು ಕಾತುರದಿ ಕಾಣಲು ಬಂದಾಗ ಕಾಣನಿವನು
ಕರ್ಮ ಕಳೆಯದೆ ದರುಶನವೀಯನು ಅವನ  ಅಣತಿ ಇಲ್ಲದೆ  ಸಿಗನಿವನು|

ಪೊಳ್ಳು ಬಕುತಿಗೆ ಎಂದೂ ಒಲಿಯನು ನಿಜ ಬಕುತಿಗೆ ಸುಲಭನಿವನು ।
ಆಡಂಬರವ ಬೇಡನಿವನು ಸಹಜ ಪ್ರೀತಿಗೆ  ಸದಾ  ಒಲಿಯುವನು|

ಮರುಗುವನು ಬಕುತರ ಬವಣೆಗೆ ಸದಾ ಅವರ ಕಾಯ್ವನು
ಶುದ್ದ ಮನದಿ ಬದುಕ ನಡೆಸಿ ಅನ್ಯರ ವಿಚಾರ ಬೇಡವೆಂದನು|

ಸಾಧನೆ ಬಯಸಿ ಬರುವ ಭಕುತಗೆ  ತನ್ನದೆಲ್ಲ ಧಾರೆಎರೆಯಲು ಸಿದ್ದನಿವನು
ಲಾಕಿಕ ಬದುಕಿನ ಬವಣೆ ನೀಗುತ ಜೀವನದ ಅರ್ಥ ತಿಳಿಸಿದನಿವನು|

ಮನ್ನಿಸುವನು ಪಾಮರರನು ಎಚ್ಚರಿಸಿ  ಉದ್ದರಿಸಿ ಹರಸಿ ಕಲಿಸುವನು
ಭವರೋಗ ವೈದ್ಯನಿವನು ಸಕಲ ಜೀವಿಗಳ  ಸಲಹಿ ಹರಸುವನು|

No comments:

Post a Comment