ಒಟ್ಟು ನೋಟಗಳು

Tuesday, October 2, 2018

ಗುರುನಾಥ ಗಾನಾಮೃತ 
ನಾನೆಂತ ಮನುಜನೋ ಮನದಮಾತ ಅರಿಯದೆ ಮರುಗುತಿಹೆನೊ
ರಚನೆ: ಆನಂದರಾಮ್, ಶೃಂಗೇರಿ  


ನಾನೆಂತ ಮನುಜನೋ ಮನದಮಾತ ಅರಿಯದೆ ಮರುಗುತಿಹೆನೊ
ನಿನ್ನ ನಾಮವ ಜಪಿಸದೇ ಅಂಧನಾಗಿ ಬದುಕಬಂಡಿ ನಡೆಸಿಹೆನೋ|

ಮೂಡನಂತೆ ಅಲ್ಲಿ ಇಲ್ಲಿ ಅಲೆದು ನಿನ್ನ ಅರಿಯದಾದೆ  ತಿಳಿಯದಾದೆ
ಬಳಿಯಿದ್ದರೂ ನಿನ್ನ ಬೇಡದಲೆ  ಇನ್ನೆಲ್ಲೋ ಕಾಲ ಕಳೆದು ಸೋತುಹೋದೆ|

ಜೀವನದ ಪಾಠವ ಮನಕೆ ನಾಟುವ ನುಡಿಯಲಿ ತಿಳಿಸುತ ಹರಸಿದೆ
ಕೊಂಕು ನುಡಿಯದೇ ಬದುಕ ಡೊಂಕನು ತಿದ್ದಿ ದಾರಿ ತೋರಿದೆ|

ಬೇಡದಲೇ ಬಂದು ನೋವ ನೀಗಿ ಹರಸುವ ದೇವ ನೀನಲ್ಲವೇ
ನಿಜ ಬಕುತನ ಬದುಕ ಬವಣೆ ನೀಗಿ ಮನಶಾಂತಿ ನೀಡುವ ಗುರುವಲ್ಲವೇ|

ಗುರು ನಂಬಿ ನಡೆದು ಬದುಕ ಹಸನು ಮಾಡಿಕೊಳ್ಳಿ ಎಂದಿರಿ ನೀವು
ನಡೆ ನುಡಿಯಲಿ ನಿಗವಹಿಸಿ ಶುದ್ದ ಮನದಿ ಬದುಕ ನಡೆಸ ಬೇಕು ನಾವು|

No comments:

Post a Comment