ಒಟ್ಟು ನೋಟಗಳು

Sunday, October 14, 2018

ಗುರುನಾಥ ಗಾನಾಮೃತ 
ಗುರುಕರುಣೆಯೇ ಸತ್ಯ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುಕರುಣೆಯೇ ಸತ್ಯ 
ಅದನರಿಯುವ ನಿತ್ಯ ।।

ಕಷ್ಟವಿರಲಿ ಸುಖವಿರಲಿ‌
ಪೊರೆವ ಸದಾ ಕಣ್ರೆಪ್ಪೆಯಂತೆ ।
ದಟ್ಟಾಡವಿಯಲಿರಲಿ ಬಟ್ಟ ಬಯಲಲಿರಲಿ
ಸಲಹುವ ಸದಾ ತಾಯಿಯಂತೆ ।। ೧ ।।

ನಮ್ಮೆಲ್ಲಾ ನೋವು ಸಂಕಟಗಳು
ಗುರುವಿಗೆ ಅರಿವುಂಟು ।
ಮನವು ಪಕ್ವವಾದಾಗ ಅವ ಕೊಡುವ
ಫಲದಲಿ ಸುಖವುಂಟು ।। ೨ ।।

ಹೇಳಿಸಿಕೊಳ್ಳದೆ ಕೊಟ್ಟುಬಿಡುವನು
 ನಮಗೆ ಸೌಭಾಗ್ಯವನು ।
ನೋಯಿಸದೆ ಉಣಿಸಿಬಿಡುವನು 
ಮಧುರ ಪೀಯೂಷವನು ।। ೩ ।।

ಅವನ ಅಮೃತ ದೃಷ್ಟಿಯಲಿ
ಮೇಲುಕೀಳೆಂಬ ಭಾವವಿಲ್ಲ ।
ಅವನ ದರ್ಬಾರಿನಲಿ
ಬಡವ ಬಲ್ಲಿದನೆಂಬ ಭೇದವಿಲ್ಲ ।। ೪ ।।

ಗುರುನಾಮಕಿಂತ ಮಿಗಿಲಾದ 
ಅನ್ಯ ತಪವು ಇಲ್ಲ ।
ಗುರುತೋರಿದ ದಾರಿಗಿಂತ 
ಬೇರೆ ದಾರಿಯು ಇಲ್ಲ ।। ೫ ।।

No comments:

Post a Comment