ಕರುಣಿಸ ಬಾರದೇ ಗುರುವೇ ಎನ್ನನು ಇನ್ನೆಷ್ಟು ತಡ ಮಾಡುವೆ ಪ್ರಭುವೇ
ನಿನ್ನ ಬೇಡುವ ಮನವೇತಕೆ ನೀಡಿದೆ ಎನಗೆ ಇದು ನಿನ್ನ ಲೀಲೆಯ ಪರಿಯಲ್ಲವೇ|
ಓಡುವ ಮನದ ಅರ್ಥವಿಲ್ಲದ ದುರಾಸೆಯ ಸೆಳೆತವ ತಾಳದಾದೆನೋ
ಅರಿವಿದ್ದರೂ ಎಡವುತಿಹ ಈ ನನ್ನ ಮನದ ಹುಂಬ ತನಕೆ ಸೋತುಹೋದೆನೋ|
ಕರ್ಮ ಕಳೆಯದೇ ಎನ್ನ ಮನ ಶುದ್ಧಿಯಾಗದೆ ನಿನ್ನ ಕರುಣೆ ದೊರೆಯದೇನೊ
ಕಪಟ ಭಾವಗಳ ಸಂಗಮದಿ ಬದುಕು ಬಸವಳಿದು ಸೋತಿತೇನೋ|
ಓಡುವ ಬದುಕಿನ ದಾರಿಯಲಿ ಬರೀ ಪೊಳ್ಳು ಮಾತುಗಳ ದ್ವನಿ ಕೇಳಿದೆಯೋ
ಗುರಿ ತಲುಪಿಸುವ ಮುನ್ನ ನೀ ಮೆಚ್ಚುವ ಬದುಕು ನಡೆಸುವ ಬಗೆ ತಿಳಿಸೋ ದೊರೆಯೇ|
ನೇಮನಿಷ್ಠೆಗಳ ಅರಿವೆನಗಿಲ್ಲ ನಿನ್ನ ಸೇವಿಸುವುದರ ಬಿಟ್ಟು ಬೇರೇನೂ ಬೇಕಿಲ್ಲಾ
ನೀ ಕರುಣಿಸುವ ಬಕುತರ ನಡುವೆ ಈ ಪಾಮರನೂ ಒಬ್ಬನಾಗಿರಲಿ ಗುರುದೇವ|
.
Parama poojya venkatachala avadootarige nanna saashtaanga pranaamagalu. Yellaranu ee kantaka dinda mukthi kodisi uddarisi Gurudeva.sarve jano sukinobavantu.
ReplyDelete