ಮನತುಂಬಿ ಹಾಡಿದಂತೆ ನಟಿಸುತ ಮಲಿನ ಭಾವದಿ ನಿನ್ನ ಬೇಡಿ ಫಲವುಂಟೇನು
ಓಡುತಿಹ ಆಸೆಗಳ ಬೆನ್ನತ್ತಿ ಭಜಿಸಿ ಕರುಣಿಸೆಂದರೆ ಗುರು ಒಪ್ಪುವನೇನು|
ಯಾರೂ ತೋರದ ಭಕುತಿ ನಾ ತೋರುವನೆಂಬ ಆತುರದಿ ಮುಗ್ಗರಿಸಿ ಬಿದ್ದೆನೇನೋ
ಮರುಳ ಮಾತಿನ ಪದವನು ಜೋಡಿಸುತ ಶುದ್ಧ ಬಕುತಿಗೆ ವಂಚಿಸಿ ಸೋತು ಹೋದೆನೇನೋ|
ನೀ ಕರುಣಿಸೆಂದು ಬೇಡುತ ಮನಸಿನ ದುರಾಸೆ ಮರೆಮಾಚದೆ ನೀ ಹರುಸುವಿಯೇನು
ಅನ್ಯರ ಹಿತ ಕಾಯದೆ ಸ್ವಾರ್ಥದಲಿ ಬದುಕು ನಡೆಸಿರೆ ನೀ ನನ್ನ ಒಪ್ಪುವಿಯೇನು|
ನೀ ನುಡಿವಂತೆ ನಿನ್ನ ಕರುಣೆಗಾಗಿ ಹಂಬಲಿಸುವ ಬಕುತರ ಕೂಗಿನ ಮುಂದೆ ನಾನಿಲ್ಲವೇನೋ
ಬರೀ ತೋರಿಕೆಯ ಅರಿಕೆಗೆ ನೀ ಒಲಿಯಲಾರೆಂಬ ಅರಿವು ನನ್ನ ಮನ ಅರಿಯದಾಯಿತೇನೊ|
ಎನ್ನ ಬದುಕನು ಬದಲಿಸಿ ನಿನ್ನಲೇ ನೆಲೆಯಿರಿಸಿ ನೀ ಕಾಯಬಾರದೇನೋ
ಇನ್ನೆಷ್ಟು ಬೇಡಲಿ ಗುರುವೇ ದಾರಿ ತೋರಿ ಪಾಮರನ ಹರಸಬಾರದೇನೋ|
Poojya gurugalaada venkatachala Avara paadagalige nanna saashtaanga pranaamagalu. Swamy Yellaranu Harasi asheervadisi. Hari om tatsat.
ReplyDelete