ದೂರ ತಳ್ಳಬೇಡಿ ಎನ್ನ ಗುರುವೇ ನಿಮ್ಮ ಸೇವೆಗೈವ ಭಾಗ್ಯದಿಂದ
ಮುನಿಸು ತೋರಬೇಡಿ ಪ್ರಭುವೇ ನಾನು ನಿಮ್ಮ ಭಜಿಪ ರೀತಿಯಿಂದ|
ತರವಲ್ಲದ ಬದುಕು ನಡೆಸಿ ಮುಖವಾಡ ಹೊತ್ತು ನಿನ್ನ ಬೇಡುವುದೆಂತು
ನುಡಿವ ಮಾತುಗಳಲಿ ಶುದ್ಧಭಾವ ಇಲ್ಲದಿರಲು ಗುರು ನೀಡುವುದೇನುಂಟು|
ಅಳುಕು ಮನವ ಹೊತ್ತು ತಳಕು ಭಾವ ತೋರಿ ನಿನ್ನ ವಂಚಿಸುವುದೆಂತು
ಹೃದಯದಲಿ ಮಲಿನ ಆಸೆ ತುಂಬಿ ಬಕುತನ ವೇಷಧರಿಸಿ ನಿನ್ನ ಬೇಡುವುದೆಂತು|
ಹೆತ್ತ ತಂದೆತಾಯಿಗಳ ಸೇವೆಗೈಯಲಿಲ್ಲ ಮುನಿಸು ತೋರದೆ ಹೇಗೆ ಹರಸಬಲ್ಲ
ನಾನೇ ದುಡಿವನೆಂಬ ಹುಂಬಿನಲಿ ಗುರುವೇ ನಿನ್ನ ಮಾತು ಮರೆತನಲ್ಲ|
ನಿನ್ನ ನೆನೆವ ಮನವ ನೀಡಿ ಅನ್ಯರ ಸೊತ್ತಿನಾಸೆ ನೀಡಬೇಡ ಗುರುವೇ
ನಿನ್ನ ಸೇವೆಯ ಭಾಗ್ಯವ ನೀಡಿ ನೀ ನಡೆದ ದಾರಿಯ ದೂಳು ಮಾಡಿ ಹರಸೋ ದೊರೆಯೇ|
Sakaraayapurada avadootaraada venkatachala Avara paadagalige nanna bhakti poorvaka namanagalu. Sarvarigu asheervadisi uddarisi. Hari om tatsat.
ReplyDelete