ಎಂಥಾ ವೈಭವವೋ ಬಲು ಆನಂದವೋ ಕೈಲಾಸದರೆಗಿಳಿದೆದೆಯೋ
ಧರೆಗಿಳಿದ ಮಹಾದೇವನೋ ಗುರುವು ಸಖರಾಯಪುರದವಾಸನೋ|
ಬೃಂದಾವನವೋ ಅದು ನಿಜ ಬಕುತರ ನೆಮ್ಮದಿಯ ತಾಣವೋ
ಹಸಿರು ತುಂಬುದೆಯೋ ತೆಂಗು ಕಂಗುಗಳ ನಿರ್ಮಲ ಪುಣ್ಯಭೂಮಿಯೋ|
ವಿಶ್ವ ವ್ಯಾಪಿಯೋ ನನ್ನ ಗುರುವಿನ ಕರುಣೆಯೋ ಬಲು ಅಪರೂಪವೋ
ಎಲ್ಲರಿಗೂ ದೊರೆವುದೋ ಮಹಾಮಹಿಮನ ಕೃಪೆಯ ಹಾರೈಕೆಯೋ|
ಪೂಜೆಯ ಆಡಂಬರವ ಒಲ್ಲನೋ ಗುರುವು ಮನದಾಳದ ಭಕುತಿಗೆ ಒಲಿದನೋ
ಅರಿತ ಬಕುತರ ಗುರುತಿಸೆ ನಾನೆಂಬ ಭಾವವ ಅಳಿಸೆ ಮುದದಿ ಸಲಹುವನೋ|
ಏನೂ ಬೇಡನೋ ನನ್ನ ಗುರುವು ತೋರದಿರು ನಿನ್ನ ಬಕುತಿಯ ಬಡತನವೋ
ಎಲ್ಲಾ ನೀನೆನುತ ಪಡೆವೆನು ನೆಮ್ಮದಿಯ ಬದುಕಿನ ನಿತ್ಯ ಪ್ರಸಾದವೋ|
Poojya gurugalaada venkatachala Avara paadagalige nanna bhakti poorvaka namanagalu. Yellaranu Harasi asheervadisi Kaapadi. Hari om tatsat.
ReplyDelete