ಉಸಿರು ಉಸಿರಲೂ ಸದಾ ನಿನ್ನ ನಾಮವೇ ತುಂಬಿರಲಿ ಗುರುವೇ
ಆಡುವ ಮಾತುಗಳಲಿ ನಿತ್ಯ ನಿನ್ನ ಚರಿತವೇ ಕೇಳಿ ಬರಲಿ ಪ್ರಭುವೇ|
ನಾ ಗಳಿಸುವ ನಿತ್ಯ ಜೀವನದ ಕೂಳು ನಿನ್ನ ನಾಮ ಜಪಿಸಿದ ಫಲವಾಗಿರಲಿ
ಎನ್ನ ಜೀವನಕೆ ನಿನ್ನ ನೆನಪು ಸದಾ ಜೀವ ಸಂಜೀವಿನಿಯಾಗಿ ಬಲ ನೀಡಲಿ|
ಅನುಮಾನದ ಗೂಡಾಗಿರುವ ಈ ಮನಕೆ ನಿನ್ನ ಸ್ಮರಣೆಯು ಬಲ ನೀಡಿ ಹರಸಲಿ
ಎನ್ನ ಅಂತರಂಗದಲಿ ಹುದುಗಿಹ ಮಾಯೆಯ ಮುಖವಾಡ ಕಳಚಿ ಬೀಳಲಿ|
ಬೆದರಿ ಬದುಕು ನಡೆಸಿ ರೋಗ ರುಜಿನಗಳಿಗೆ ಅಂಜಿ ನಿಂತೆನು ನಿನ್ನಂಗಳದಲಿ
ಭವರೋಗ ವೈದ್ಯ ನೀನು ಮನದಾಳದ ಭಯ ಓಡಿಸಿ ಸದಾ ಹರಸುವಂತಾಗಲಿ|
ಎಲ್ಲಾ ಮರೆತಂತೆ ನಟಿಸಿ ಎನ್ನ ಮನ್ನಿಸೆಂದು ಬೇಡುತ ಮತ್ತೆ ಮತ್ತೆ ತಪ್ಪೆಸಿಗಿಹೆನಿಲ್ಲಿ
ಸಖರಾಯಧೀಶ ನೀನು ಎನ್ನ ಭಗವಂತನು ನಿತ್ಯವೂ ಭಜಿಸುತಿರೇ ಮನ್ನಿಸುವನಿಲ್ಲಿ||
Hari om tatsat
ReplyDeletePoojya venkatachala avadootarige nanna bhakti poorvaka namanagalu. Sadaa nimma aashirvaada beduva nimma obba bhakta. Kaapadi Harasi.