ಎಂಥಾ ಭಕುತನೋ ನಾನು ಬರೀ ಪದಗಳಲೇ ನಿನ್ನ ಪೂಜಿಸಿಹೆನೋ
ನಿಜ ಭಕುತಿ ಮಾಡಲಿಲ್ಲ ನಾನು ಬೇಡುವುದೆಲ್ಲಾ ನೀಡು ಎನುತಿಹೆನೋ|
ಅಭಿಷೇಕ ಮಾಡಲಿಲ್ಲ ನಾನು ಧೂಪ ದೀಪ ತೋರದೇ ಬರಿಗೈಲಿ ಬೇಡುತಿಹೆನೋ
ಪುಷ್ಪ ಗಂಧಗಳಿಲ್ಲ ಮಲಿನ ತುಂಬಿದ ಮನಹೊತ್ತು ನಿನ್ನ ಮುಂದೆ ನಿಂತಿಹೆನೋ|
ಸೇವೆ ಮಾಡಲಿಲ್ಲ ನಾನು ನಿನ್ನ ಸೇವಕರ ಸಂಗ ತೊರೆದು ಹೋದೆನಲ್ಲೋ
ಪಾದ ನೋಡಲಿಲ್ಲ ನಾನು ತಲೆಯೆತ್ತಿ ತೋರಿಕೆಗೆ ಭಜಿಸಿ ನಿಂತೆನಲ್ಲೋ|
ಎಲ್ಲಾ ನೋಡುವರೆಂದು ಸಾಲಿನಲಿ ಮುಂದೆ ನಿಂತು ಬೀಗುತಿಹೆನೋ
ವೇಷ ಭೂಷಣಕೆ ಮೊರೆ ಹೋಗಿ ನಿಜ ಭಕುತರ ಭಕುತಿ ಅರಿಯದಾದೆನೋ|
ನಿನ್ನಣತಿ ಇಲ್ಲದೇ ನಿನ್ನ ಭಕುತನೆನುತ ನಿನ್ನ ನಾಮ ಜಪಿಸುತಿಹೆನೋ
ಸಖರಾಯಪುರದ ದೊರೆಯೇ ಗುರುವೇ ನೀನು ಎನ್ನ ಮನ್ನಿಸಿ ಸಲಹುವೆಯಾ ಇನ್ನುI
Poojya venkatachala avadootarige nanna bhakti poorvaka namanagalu. Yellarigu nimma krupe haagu rakshe sadaa erali. Hari om tatsat.
ReplyDelete