ಗುರುನಾಥ ಗಾನಾಮೃತ
ದಿಕ್ಕು ಕಾಣದೆ ನಿಂತಿಹೆನೋ
ರಚನೆ: ಅಂಬಾಸುತ
ದಿಕ್ಕು ಕಾಣದೆ ನಿಂತಿಹೆನೋ
ಚೊಕ್ಕದಾರಿಯ ತೋರಿಸೋ||ಪ||
ಅಕ್ಕರೆಯ ಮಗುವೆಂದು ಭಾವಿಸೋ
ಸಕ್ಕರೆಯ ನಾಲಿಗೆಯೊಳಿರಿಸೋ ಅವಧೂತನೇ ||ಅ.ಪ||
ದರ್ಪವೆಂಬುವ ಸರ್ಪ ಓಡಿಸೋ
ಜ್ಞಾನ ದಾರಿದ್ರ್ಯವನು ಅಳಿಸೋ
ಭವದ ಬಂಧನ ಬಿಡಿಸಿ ಎನ್ನನ್ನು
ನಿನ್ನ ಅಂಕೆಯೊಳಾಗಿರಿಸೋ ಅವಧೂತನೇ ||೧||
ಮಾತು ಕೆಡಿಸೋ ಮೌನ ಕಲಿಸೋ
ದುಷ್ಟ ಚಿಂತೆಯಾ ಮರೆಸೋ
ಸಾಧು ಸಜ್ಜನರಾ ಸಂಘವಾ
ಇತ್ತು ಎನ್ನನುದ್ಧರಿಸೋ ಅವಧೂತನೇ||೨||
ನಿನ್ನ ದಾಸನನ್ನಾಗಿಸೋ
ನಿನ್ನ ಮನೆಯೊಳಗೆನ್ನನಿರಿಸೋ
ಕಾಂಚಾಣಾ ಕಾಮಭೋಗವಾ
ಎನ್ನ ಮನದಿಂದ ಮರೆಮಾಡೋ ಅವಧೂತನೇ||೩||
ನೀನೇ ಅಂಬಾ ಸುತನು ನಾನು
ನನ್ನತನವನು ದಹಿಸೋ
ಮೋಕ್ಷಾದೀ ಬಯಕೆಗಳನು
ಬಯಸದಂತೆ ಹರಸೋ ಅವಧೂತನೇ||೪||
No comments:
Post a Comment