ಗುರುನಾಥ ಗಾನಾಮೃತ
ಅಖಿಲಗ್ರಹಬಲನೀನೇ ಸಖರಾಯಪುರೀಶ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಅಖಿಲಗ್ರಹಬಲನೀನೇ ಸಖರಾಯಪುರೀಶ
ಎಲ್ಲರನು ಪೊರೆಯುವ ಗುರುವೇ ಜಗದೀಶ ||
ಗುರುಬಲವು ನೀನು ಶುಕ್ರಕಾಂತಿಯು ನೀನು
ಸೂರ್ಯತೇಜನು ನೀನು ಇಂದುಶೀತಲ ನೀನೇ |
ಮಂಗಳಕರ ನೀನೇ ಬುಧಮತಿಯು ನೀನೇ
ಶನಿಗತಿಯು ನೀನು ಮನದ ಛಾಯೆಯು ನೀನೇ || ೧ ||
ಕರುಣೆಯ ವರ್ಷಿಸುವ ಇಂದ್ರದೇವನು ನೀನು
ಕರ್ಮಗಳ ದಹಿಸುವ ವೈಶ್ವಾನರನು ನೀನೇ |
ಭವಭೀತಿ ಭಂಜಿಸುವ ಯಮಧರ್ಮನೂ ನೀನು
ಹೃದಯದಿ ಸಂಚರಿಪ ವಾಯುದೇವನೂ ನೀನೇ || ೨ ||
No comments:
Post a Comment